ಮಂಗಳೂರು: ಪದವೀಧರರಿಗೆ ಮತ್ತು ಡಿಪ್ಲೋಮಾ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆ ನೋಂದಾವಣಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸೋಮವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಈ ಸಂಬಂಧ ಮಾತನಾಡಿ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲೆಯಲ್ಲಿ
ಈ ಯೋಜನೆಗಳ ಅರ್ಹರಾದರಾದ ಸುಮಾರು 4500 ಮಂದಿ ನಿರುದ್ಯೋಗಿಗಳಿದ್ದಾರೆ, ಈಗಾಗಲೇ 916 ನೋಂದಾಣಿ ಆಗಿದ್ದು ಉಳಿದವರು ನೋಂದಾಣಿಯನ್ನು ಉಳಿದೆರಡು ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜಾ, ಮಂಗಳೂರು ವಿಶ್ವವಿದ್ಯಾಲಯ ಕೌಶಲಾಭಿವೃದ್ಧಿ ಪ್ರೊ. ಎ.ಎಂ. ಖಾನ್. ಮತ್ತಿತರರು ಉಪಸ್ಥಿತರಿದ್ದರು














