ಸುಳ್ಯ: ಯುವಜನ ಸಂಯುಕ್ತ ಮಂಡಳಿಯ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯುವ ಜನತೆಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಳ ಹಾಗೂ
ಗೌರವಾಧ್ಯಕ್ಷರಾದ ದಯಾನಂದ ಕೇರ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತೇಜಸ್ವಿ ಕಡಪಳ ಸ್ವಾಗತಿಸಿ, ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ ವಂದಿಸಿದರು. ಕೋಶಾಧಿಕಾರಿ ಮುರಲಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ ವಹಿಸಿದ್ದರು. ಬಹುಮಾನ ವಿತರಕರಾಗಿ ಯುವ ಸೇವಾ ಸಂಸ್ಥೆಯ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ ಹಾಗು ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಹಾಗೂ ತೀರ್ಪುಗಾರರಾದ ಶಶಿಧರ ಮೋಂಟಡ್ಕ, ಮಂಡಳಿಯ ಗೌರವಾಧ್ಯಕ್ಷ ದಯಾನಂದ ಕೇರ್ಪಳ ಉಪಸ್ಥಿತರಿದ್ದರು.
ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಸ್ವಾಗತಿಸಿ ನಮಿತಾ ಹರ್ಲಡ್ಕ ಧನ್ಯವಾದ ಗೈದರು.ಮುರಲಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.
ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಅಭಿಜ್ಞಾ ಭಟ್ ನಾಟಿಕೇರಿ(ಎನ್.ಎಮ್.ಸಿ ಸುಳ್ಯ )-ಪ್ರಥಮ, ದೇವಿಪ್ರಸಾದ್.ಜಿ.ಸಿ(ಮಿತ್ರ ಬಳಗ ಕಾಯರ್ತೋಡಿ )-ದ್ವಿತೀಯ, ಅಭಿಷೇಕ್.ಎಂ(ಎನ್.ಎಮ್.ಸಿ ಸುಳ್ಯ)-ತೃತೀಯ,ಭಾಷಣ ಸ್ಪರ್ಧೆಯಲ್ಲಿ ಕೃತಸ್ವರ ದೀಪ(ಎನ್.ಎಮ್.ಸಿ ಸುಳ್ಯ )-ಪ್ರಥಮ,ಸುಧಾ.ಬಿ.ಎಸ್ ಚೊಕ್ಕಾಡಿ-ದ್ವಿತೀಯ, ದೇವಿಪ್ರಸಾದ್.ಜಿ.ಸಿ(ಮಿತ್ರ ಬಳಗ ಕಾಯರ್ತೋಡಿ )-ತೃತೀಯ ಬಹುಮಾನ ಗಳಿಸಿದರು. ಬಹುಮಾನ ವಿಜೇತರಿಗೆ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು