ಬೆಂಗಳೂರು: ಬೆಂಗಳೂರಿನ ನೆಲಮಂಗಲದ ಮಾತೃಭೂಮಿ ಯುವ ಸಂಘ ಇದರ 30 ನೇ ವರ್ಷದ ಸಂಭ್ರಮದ ಅಂಗವಾಗಿ ಕೊಡಮಾಡುವ ರಾಜ್ಯ ಮಟ್ಟದ ಮಾತೃಭೂಮಿ ಸಾಂಘಿಕ ಪ್ರಶಸ್ತಿಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಭಾಜನವಾಗಿದೆ. ಸೆ.13ರಂದು ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸುಳ್ಯ ಯುವಜನ ಸಂಯುಕ್ತ ಮಂಡಳಿ ಕಾರ್ಯದರ್ಶಿ ನಮಿತಾ ಹರ್ಲಡ್ಕ ಪ್ರಶಸ್ತಿ ಸ್ವೀಕರಿಸಿದರು. ಕಾರ್ಮಿಕ ಸಚಿವರಾದ

ಸಂತೋಷ್ ಲಾಡ್ ಪ್ರಶಸ್ತಿ ಪ್ರದಾನ ಮಾಡಿದರು. ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ, ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಬಾಲಾಜಿ ಎಸ್. ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಪ್ರವೀಣ್ ಜಯನಗರ, ಮಾಜಿ ಅಧ್ಯಕ್ಷರಾದ ಶಿವಪ್ರಕಾಶ್ ಅಡ್ಡಣಪಾರೆ, ತೇಜಸ್ವಿ ಕಡಪಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಪದಾಧಿಕಾರಿಗಳಾದ ಪ್ರಸಾದ್ ಕಾಟೂರು, ಜನಾರ್ದನ ನಾಗತೀರ್ಥ, ಲೋಹಿತ್ ಬಾಳಿಕಳ, ನಿತೀಶ್ ಎರ್ಮೆಟ್ಟಿ, ವಿಜೇಶ್ ಹಿರಿಯಡ್ಕ, ವಿನುತಾ ಪಾತಿಕಲ್ಲು, ಪವನ್ ಪಲ್ಲತಡ್ಕ, ಸತೀಶ್ ಮೂಕಮಲೆ ಉಪಸ್ಥಿತರಿದ್ದರು.












