ಸುಬ್ರಹ್ಮಣ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಮಂಗಳೂರು ಮತ್ತು ಎಸ್ಎಸ್ಪಿಯು ಕಾಲೇಜು ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ ಉದ್ಘಾಟಿಸಿದರು.ಎಸ್ಎಸ್ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ದ.ಕ.ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಸಹಾಯಕ ನಿರ್ದೇಶಕ ರಾಜೇಶ್.ಜಿ, ಎಸ್ಎಸ್ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ಸುಬ್ರಹ್ಮಣ್ಯ ಸರಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರು ವಿನೋದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೌಲ್ಯಾ ಕಾರ್ಯಕ್ರಮ ಸಮಾರಂಭದ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕಲಾ ವೈಭವ ನೆರವೇರಿತು. ಆರಂಭದಲ್ಲಿ ಶ್ರದ್ಧಾ ಮತ್ತು ಬಳಗದಿಂದ ನೃತ್ಯ ರೂಪಕ ಪ್ರದರ್ಶಿತವಾಯಿತು.ನಂತರ ಅಧಿತಿ ಮತ್ತು ಬಳಗ ಮಂಗಳೂರು ಇವರಿಂದ ಸುಗಮ ಸಂಗೀತ, ಯಶ್ವಿತಾ ಮತ್ತು ಬಳಗ ಹಾಗೂ ರಾಜಲಕ್ಷ್ಮಿ ಮತ್ತು ಬಳಗದಿಂದ ಜಾನಪದ ನೃತ್ಯ, ತುಷಾರ್.ಎಚ್ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ,ಎಸ್ಎಸ್ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನೆರವೇರಿತು.
ವಿವಿಧ ಯಕ್ಷಗಾನ ಮೇಳಗಳ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನರಕಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶಿತವಾಯಿತು. ಯಕ್ಷಗಾನದಲ್ಲಿ ಉಪನ್ಯಾಸಕಿ ಭವ್ಯಶ್ರೀ ಹರೀಶ್ ಕುಲ್ಕುಂದ(ಭಾಗವತರು), ರೋಹಿತ್ ಉಚ್ಚಿಲ(ಚೆಂಡೆ), ಶ್ರೀಧರ ವಿಟ್ಲ(ಮದ್ದಳೆ),ಅಗಸ್ತ್ಯ ಕುಲ್ಕುಂದ(ಚಕ್ರತಾಳ) ಹಿಮ್ಮೇಳದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಗುರುತೇಜ್ ಶೆಟ್ಟಿ ಒಡಿಯೂರ್(ಸತ್ಯಭಾಮೆ),ಪ್ರಸಾದ್ ಸವಣೂರು(ಶ್ರೀಕೃಷ್ಣ),ಮನೀಶ್ಪಾಟಾಳಿ ಎಡನೀರು(ನರಕಾಸುರ) ಕಲಾವಿದರಾಗಿ ಸಹಕಾರ ನೀಡಿದರು.ಪತ್ರಕರ್ತ ಹರೀಶ್ ಕುಲ್ಕುಂದ ಕಾರ್ಯಕ್ರಮ ಸಂಯೋಜಿಸಿದ್ದರು.











