ಸುಳ್ಯ: ದೇಶದ ಸಮಸ್ಯೆಗಳನ್ನು ಪರಿಹರಿಸಿ,ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ. ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದಿನ 25 ವರ್ಷಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಅಮೃತ ಕಾಲ

ಎಂದು ಘೋಷಿಸಿದ್ದಾರೆ. ಆಂತರಿಕ ಸಮಸ್ಯೆಗಳನ್ನು ಪರಿಹರಿಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ 2047ರಲ್ಲಿ ಭಾರತವನ್ನು ಜಗತ್ತಿನ ನಂಬರ್ವನ್ ರಾಷ್ಟ್ರವನ್ನಾಗಿ ರೂಪಿಸುವುದು ಗುರಿ ಎಂದು ಅವರು ಹೇಳಿದರು. ದೇಶದ ಶೇ.65 ರಷ್ಟು ಮಂದಿ ಯುವಜನಾಂಗ ಇದ್ದಾರೆ. ದೇಶದ ಪ್ರಜಾಪ್ರಭುತ್ವ ಯುವಜನಾಂಗದ ಕೈಯಲ್ಲಿದೆ ಎಂದ ಅವರು ಯುವ ಜನತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರೀಯರಾಗಿ ಭಾಗವಹಿಸಿ ನವಭಾರತದ ನಿರ್ಮಾಣದ ನೇತೃತ್ವ ವಹಿಸಬೇಕು ಎಂದು ಹೇಳಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಅನೇಕ ಆಂತರಿಕ ಸಮಸ್ಯೆಗಳು ಇತ್ತು 8000 ಹಳ್ಳಿಗಳಿಗೆ ವಿದ್ಯುತ್ ಇರಲಿಲ್ಲ, 20 ಕೋಟಿ

ಜನರಿಗೆ ಮನೆ ಇರಲಿಲ್ಲ, 46 ಕೋಟಿ ಜನರಿಗೆ ಬ್ಯಾಂಕ್ ಖಾತೆ ಇರಲಿಲ್ಲ, 11 ಕೋಟಿ ಜನರಿಗೆ ಶೌಚಾಲಯ ಇರಲಿಲ್ಲ, ಶೇ.64 ಮಂದಿಗಷ್ಟೇ ಎಲ್ಪಿಜಿ ಸಂಪರ್ಕ ಇತ್ತು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರಕಾರ ಮೊದಲ ಪ್ರಾಶಸ್ತ್ಯ ನೀಡಿತು. 2000ನೇ ಇಸವಿಯ ಮೊದಲಿನ ಭಾರತದ ಪ್ರಜಾಪ್ರಭುತ್ವ 2000ನೇ ಇಸವಿಯ ಬಳಿಕ ತುಂಬಾ ಬದಲಾಗಿದೆ. ಎರಡು ಸಾವಿರನೇ ಇಸವಿಯ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನರು ಗಂಭೀರವಾಗಿ ಪರಗಣಿಸಲು ಆರಂಭಿಸಿದ್ದಾರೆ.ಅಭಿವೃದ್ಧಿ ಮಾಡಿದರೆ ಮಾತ್ರ, ದೇಶದ ಹಿತಪ ಕಾಯುವವರಿಗೆ ಮಾತ್ತ ಮತ ನೀಡಲು ಆರಂಭಿಸಿದ್ದಾರೆ. ಇದರಿಂದ ಸರಕಾರ ಹೆಚ್ಚು ಜವಾಬ್ದಾರಿಯಿಂದ ಮತ್ತು ಉತ್ತರದಾಯಿತ್ವದಿಂದ ವರ್ತಿಸುತಿದೆ.2014ರ ಬಳಿಕ ದೇಶದಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. ಆಂತರಿಕ ಸಮಸ್ಯೆಗಳನ್ನು ಪರಿಹರಿಸಿ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಪರಹಾರ

ಆಗುತಿದೆ.ಪದ್ಮಶ್ರೀಯಂತಹಾ ಅತ್ಯುನ್ನತ ನಾಗರಿಕ ಪ್ರಶಸ್ತಿ ಜನ ಸಾಮಾನ್ಯರನ್ನೂ ಅರಸಿ ಬರುತಿದೆ ಎಂದು ಅವರು ಹೇಳಿದರು. ಯುವ ಜನಾಂಗ ತಮ್ಮ ಬಿಝಿ ಅಧ್ಯಯನ, ವೃತ್ತಿ ಬದುಕಿನ ಮಧ್ಯೆ ಬಿಡುವು ಮಾಡಿಕೊಂಡು ದೇಶದ, ಜಗತ್ತಿನ ಬದಲಾವಣೆಗಳ ಬಗ್ಗೆ, ಆಗು ಹೋಗುಗಳ ಬಗ್ಗೆ ಗಮನಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಯುವ ಸಂವಾದ ಕಾರ್ಯಕ್ರಮದ ಸಂಯೋಜಕ ಬ್ರಿಜೇಶ್ ಚೌಟ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೀಲಾಂಬಿಕೈ ನಟರಾಜನ್ ಸ್ವಾಗತಿಸಿ, ಅಕ್ಷಯ್ ಕೆ.ಸಿ.ವಂದಿಸಿದರು. ಪ್ರಿಯಾಂಕ ಹಾಗು ಕುಲ್ದೀಪ್ ಕಾರ್ಯಕ್ರಮ ನಿರೂಪಿಸಿದರು.