ಪಂಜ: ಯುವಜನರ ಕಲಾ ಪ್ರತಿಭೆ ಅರಳುವ ವೇದಿಕೆಗಳಾಗಿದ್ದ ಯುವಜನ ಮೇಳಗಳು ಕೆಲವು ವರ್ಷದಿಂದ ಇದು ನಿಂತಿದೆ. ಇದು ಯುವಜನರ ಚಟುವಟಿಕೆಗಳು ಸೊರಗಲು ಕಾರಣವಾಗಿದೆ. ಇದೀಗ ಯುವ ಸಂಭ್ರಮವನ್ನು ಆಯೋಜಿಸುವ ಮೂಲಕ ಸರಕಾರಗಳು ಕಣ್ಣು ತೆರೆಸುವ ಕಾರ್ಯ ಯುವಜನ ಸಂಯುಕ್ತ ಮಂಡಳಿ ಮಾಡಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪಂಜದ
ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಭ್ರಮವನ್ನು ಉದ್ಘಾಟಿಸಿ, ಸಾಂಸ್ಕ್ರತಿಕ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮುಂದಿನ ವರ್ಷದಿಂದ ಸರಕಾರಗಳೇ ಈ ರೀತಿಯ ಯುವಜನೋತ್ಸವನ್ನು ಆಯೋಜನೆ ಮಾಡುವಂತಾಗಲಿ ಎಂದ ಅವರು ಜನಪದ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಈ ಪ್ರದೇಶದಲ್ಲಿ ಯುವ ಸಂಭ್ರಮವನ್ನು ಸಂಘಟಿಸಿ ಆ ಮೂಲಕ ಜನಪದೀಯ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ವಸ್ತು ಮೇಳವನ್ನು ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರಿ ಸಿದ್ಧ ಮಠದ ಧರ್ಮದರ್ಶಿ ರಾಜೇಶನಾಥ್ ಜೀ ಉದ್ಘಾಟಿಸಿದರು. ‘ಪಂಚಸಪ್ತತಿಯ ಮೂಲಕ ರಾಜ್ಯಕ್ಕೆ ಮಾದರಿಯಾಗುವ ಕೆಲಸವನ್ನು ಸುಳ್ಯ ಯುವಕರು ಮಾಡಿದ್ದಾರೆ’ ಎಂದು ಹೇಳಿದರು.
ವಾಹನ ಮೇಳವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಉದ್ಘಾಟಿಸಿದರು. ‘ನೆಲದ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಯುವಜನ ಸಂಯುಕ್ತ ಮಂಡಳಿ ಮಾಡಿದೆ’ ಎಂದು ಹೇಳಿದರು.
ಕೃಷಿ ಮೇಳವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಉದ್ಘಾಟಿಸಿ ಮಾತನಾಡಿ ‘ಯುವ ಶಕ್ತಿ ದೇಶದ ಶಕ್ತಿ ಎನ್ನುವ ಮಾತಿಗೆ ಅರ್ಥವತ್ತಾಗಿ ಪಂಜದಲ್ಲಿ ರಾಜ್ಯ ಮಟ್ಟದ ಯುವ ಸಂಭ್ರಮ ಆಯೋಜನೆಗೊಂಡಿದೆ. ಯುವ ಸಂಘಟನೆಯ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
ಆಹಾರ ಮೇಳವನ್ನು ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಉದ್ಘಾಟಿಸಿ ಮಾತನಾಡಿ ‘ಯುವ ಸಂಭ್ರಮ ನಾಡಿಗೆ ಉತ್ಸವದ ಪ್ರತೀತಿ ತಂದಿದೆ. ಗ್ರಾಮೀಣ ಭಾಗದಲ್ಲಿ ಕಲೆ, ಸಂಸ್ಕೃತಿಯ ಪೋಷಣೆಗೆ ಯುವ ಸಂಭ್ರಮ ನಾಂದಿಯಾಗಿದೆ ಎಂದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ,ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ,
ಪಂಜ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ ಕಿನ್ನಿಕುಮೇರಿ, ಕೆ.ಎಂ.ಎಫ್. ನಿರ್ದೇಶಕ ಭರತ್ ನೆಕ್ರಾಜೆ, ಉದ್ಯಮಿ ವಿಜಯ ಕುಮಾರ್ ಸೊರಕೆ, ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿದ್ದರು.
ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಗೌರವಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ,ಯುವ ಸಂಭ್ರಮ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಸಂಭ್ರಮ ಸ್ವಾಗತ ಸಮಿತಿ ಸಂಚಾಲಕ ಮಾಧವ ಗೌಡ ಜಾಕೆ ಸ್ವಾಗತಿಸಿದರು.ಸಾನ್ವಿ, ಯಶ್ವಿತಾ ನಾಗತೀರ್ಥ ಪ್ರಾರ್ಥಿಸಿದರು.
ತೀರ್ಥಾನಂದ ಕೊಡೆಂಕಿರಿ, ಸೋಮಶೇಖರ್ ನೇರಳ ಕಾರ್ಯಕ್ರಮ ನಿರ್ವಹಿಸಿದರು.












