ಸುಳ್ಯ: ಸೇವೆಯ ಮಹತ್ವವನ್ನು ತಿಳಿದು ಸಮಾಜಕ್ಕೆ ಹೇಳಿಕೊಡುವುದು ನಮ್ಮ ಜವಾಬ್ದಾರಿ.ರಕ್ತ ದಾನ ಪವಿತ್ರ ಸೇವೆ.ಪ್ರಪಂಚದ ಹೆಚ್ಚು ಸದಸ್ಯತ್ವ ಹೊಂದಿರುವ ಸಂಸ್ಥೆ ರೆಡ್ ಕ್ರಾಸ್.ಈ ಸೇವಾ ಸಂಸ್ಥೆಯಲ್ಲಿ ಎಲ್ಲರೂ ಸದಸ್ಯತ್ವ ಪಡೆದುಕೊಂಡು ಸೇವೆ ಸಲ್ಲಿಸಿ ಎಂದು ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ. ಸುಧಾಕರ ರೈ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ನಡೆದ ಯೂತ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸಭಾ ಅಧ್ಯಕ್ಷತೆ ವಹಿಸಿದ್ದ
ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಮಾತನಾಡಿ ಸಮಾಜ ಬದುಕಿಗೆ ಬೇಕಾದ ಮೌಲ್ಯಗಳನ್ನು ಪಡೆದುಕೊಳ್ಳಬೇಕು.ಶಾಂತಿ, ಸೌಹಾರ್ದತೆ, ಪ್ರೇರಣೆ, ಮಾರ್ಗದರ್ಶನದ ಮೂಲಕ ಜೀವನ ರೂಪಿಸಿ ಕೊಳ್ಳಬಹುದು. ರೆಡ್ ಕ್ರಾಸ್ ಘಟಕದ ಮೂಲಕ ವಿದ್ಯಾರ್ಥಿಗಳು ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಮುಖ್ಯ ಅತಿಥಿ ಎನ್ನೆoಸಿಯ ಕನ್ನಡ ವಿಭಾಗದ ಮುಖ್ಯಸ್ಥ ಕಾಲೇಜಿನ ಯೂತ್ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಪ್ರೊ ಸಂಜೀವ ಕುದ್ಪಾಜೆ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ ಹಾಗೂ ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕಿ, ಉಪನ್ಯಾಸಕಿ ಗೀತಾ ಎನ್, ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ನಾಯಕರಾದ ರಂಜಿತ್ ಎನ್ ಆರ್, ಅಪರ್ಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಭಿಷೇಕ್ ಪ್ರಾರ್ಥಿಸಿದರು. ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಗೀತಾ ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ರೆಡ್ ಕ್ರಾಸ್ ಘಟಕದ ನಾಯಕಿ ಅಪರ್ಣ ಭಟ್ ವಂದಿಸಿದರು.ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಕಾರ್ಯಕ್ರಮ ನಿರೂಪಿಸಿದರು.