ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ನಾಲ್ಕನೆಯ ತರಗತಿಯ ವಿದ್ಯಾರ್ಥಿ ಆಶ್ರಿತ್ ಎ.ಸಿ ಬೆಂಗಳೂರು ಶ್ರೀ ರಾಜರಾಜೇಶ್ವರಿ ನಗರದಲ್ಲಿ ನಡೆದ ಐದನೇ ವರ್ಷದ ಮುಕ್ತ ರಾಜ್ಯಮಟ್ಟದ
ಯೋಗಾಸನ ಸ್ಪರ್ಧೆಯಲ್ಲಿ ಗ್ರೇಡ್ ಕೆಟಗರಿ A+ ಬೆಸ್ಟ್ ಪರ್ಫಾರ್ಮರ್ ಮತ್ತು ಎಂಟರಿಂದ ಹತ್ತು ವಯೋಮಿತಿಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್ನಲ್ಲಿ ರನ್ನರ್ ಅಪ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ. ಶಾಲಾ ಸಂಚಾಲಕ ಡಾ.ರೇಣುಕಾ ಪ್ರಸಾದ್ ಅಭಿನಂದಿಸಿದರು.ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಅಭಿನಂದನಾ ಪತ್ರ ವಿತರಿಸಿದರು.





