ಸಕಲೇಶಪುರ: ಇಂದು ಬೆಂಗಳೂರಿನಲ್ಲಿ ನಡೆಯಲಿರುವ ವಾರದ ಸಭೆಗೆ ತೆರಳುವ ವೇಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಕಲೇಶಪುರದಲ್ಲಿ ನಡೆದ ಆರೋಗ್ಯಕ್ಕಾಗಿ ಯೋಗ ಶಿಬಿರ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ
ಶಾಸಕರನ್ನು ವರ್ತಕರ ಸಂಘದ ಮತ್ತು ಯೋಗ ಚೈತನ್ಯ ಶಿಬಿರದ ವತಿಯಿಂದ ಗೌರವಿಸಲಾಯಿತು.ಸಕಲೇಶಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಅಶ್ವತ್, ವರ್ತಕರ ಸಂಘದ ಅಧ್ಯಕ್ಷರಾದ ಉದಯ,ಮಾಜಿ ಸೈನಿಕರಾದ ರಾಮ, ಲಕ್ಷ್ಮಣ,ಯೋಗ ಶಿಕ್ಷಕರಾದ ಲಕ್ಷ್ಮಿ ರಂಗನಾಥ,ಜಗದೀಶ್, ಲಕ್ಷ್ಮಣ್ ಕೀರ್ತಿ, ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ ಸದಸ್ಯ ಪ್ರಸಾದ್ ಕಾಟೂರು, ಸ್ಥಳಿಯ ಬಿಜೆಪಿ ಕಾರ್ಯಕರ್ತರ ಸಹಿತ ಸಕಲೇಶಪುರ ವರ್ತಕ ಸಂಘದ ಸದಸ್ಯರು ಉಪಸ್ಥಿತರಿದ್ದರು.