ವಿನೋಬನಗರ: ವಿನೋಬನಗರ ವಿವೇಕಾನಂದ ವಿದ್ಯಾ ಸಂಸ್ಥೆಗಳು ಹಾಗೂ ಕ್ರೀಡಾಭಾರತಿ ಸುಳ್ಯ ಘಟಕ ಇದರ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಸೇವಾಭಾರತಿ ಮಂಗಳೂರು ವಿಭಾಗ ಪ್ರಮುಖ್ ಡಾ.ನಾರಾಯಣ ಶೆಣೈ ದೀಪವನ್ನು ಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು. ಬಳಿಕ ವಿದ್ಯಾಸಂಸ್ಥೆಯ
ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕ್ರೀಡಾಭಾರತಿ ಸುಳ್ಯ ಘಟಕದ ಇದರ ವತಿಯಿಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ನಡೆಸಿದ ಯೋಗ ಸ್ಪರ್ಧೆಯ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತ್ತು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಗೌರವ ಸಲಹೆಗಾರರಾದ ನ.ಸೀತಾರಾಮ,ಸಂಚಾಕರಾದ ಸುಧಾಕರ ಕಾಮತ್, ಕ್ರೀಡಾ ಭಾರತಿ ಸುಳ್ಯ ಘಟಕ ಇದರ ಅಧ್ಯಕ್ಷ ಎ.ಸಿ ವಸಂತ ಅಮಚೂರು,ಗೌರವಧ್ಯಕ್ಷ ಪುರುಷೋತ್ತಮ ಕಿರ್ಲಾಯ, ಉಪಾಧ್ಯಕ್ಷರಾದ ಶರತ್ ಅಡ್ಕಾರು, ಸದಸ್ಯರಾದ ಹರಿಪ್ರಕಾಶ್ ಅಡ್ಕಾರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲುಕು ಕಾರ್ಯವಾಹರಾದ ಕಿಶನ್ ಕೆ.ಜಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಎನ್.ಗೋಪಾಲ್ ರಾವ್,ವಿದ್ಯಾಸಂಸ್ಥೆ ಯ ಶಿಕ್ಷಕ – ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು .
ಕಾರ್ಯಕ್ರಮವನ್ನು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಜಯಪ್ರಸಾದ್ ಕಾರಿಂಜ ಸ್ವಾಗತಿಸಿದರು ,ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ವಂದಿಸಿದರು. ಪ್ರೌಢ ಶಾಲಾ ಸಹಶಿಕ್ಷಕಿ ಅನನ್ಯ ಇವರು ಕಾರ್ಯಕ್ರಮ ನಿರೂಪಿಸಿದರು.