ಸುಳ್ಯ:ಜಿದ್ದಜಿದ್ದಿನ ಹೊರಾಟದಲ್ಲಿ ಬಲಿಷ್ಠ ಇಎಸ್ಐಸಿ ದೆಜಲಿ ತಂಡವನ್ನು ಮಣಿಸಿದ ಯೇನೆಪೋಯ ಯೂನಿವರ್ಸಿಟಿ ತಂಡ
ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಪುರುಷ ವಿಭಾಗದಲ್ಲಿ ಪೂಲ್ ಬಿ ವಿಭಾಗದ ಪಂದ್ಯದಲ್ಲಿ ಎರಡನೇ ಜಯ ದಾಖಲಿಸಿತು. ಎರಡನೇ ದಿನದ ಎರಡನೇ ಪಂದ್ಯದಲ್ಲಿ ಯೇನೆಪೋಯ ಯೂನಿವರ್ಸಿಟಿ ತಂಡ ದೆಹಲಿ ವಿರುದ್ಧ 27-17 ಅಂತರದ ಜಯ ದಾಖಲಿಸಿತು.ಖ್ಯಾತ ಕಬಡ್ಡಿ ಪಟು ಜಗದೀಶ್ ಕುಂಬ್ಲೆ ತರಬೇತಿದಾರರಾಗಿರುವ ಯೇನೆಪೋಯ ತಂಡ ಆರಂಭದಿಂದಲೇ

ಬಿರುಸಿನ ದಾಳಿ ನಡೆಸಿ ಮುನ್ನಡೆಯನ್ನು ಕಾಯ್ದುಕೊಂಡಿತು. ಆಕರ್ಷಕ ದಾಳಿ ಹಾಗೂ ನಿಖರ ಹಿಡಿತಗಳ ಮೂಲಕ ಮುನ್ನಡೆದ ಯೇನೆಪೋಯ ಮೊದಲ ಅವಧಿಯ ಮುಕ್ತಾಯಕ್ಕೆ 18-6 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಾ ಸಾಗಿತು. ಎರಡನೇ ಅವಧಿಯಲ್ಲಿ ತೀವ್ರ ಪೈಪೋಟಿ ನೀಡಿದ ದೆಹಲಿಯ ಕಠಿಣ ಸವಾಲನ್ನು ಮೆಟ್ಟಿ ನಿಂತ ಯೇನೆಪೋಯ ತಂಡ ಭರ್ಜರಿ ಜಯ ದಾಖಲಿಸಿತು.
ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ ಎರಡು ತಂಡಗಳು ಅಂಕಣದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ

ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.







