ಡಾಮ್ನಿಕಾ: ಪದಾರ್ಪಣೆ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಸಿಡಿಸಿದ ಆಕರ್ಷಕ ಶತಕ ಹಾಗೂ ನಾಯಕ ರೋಹಿತ್ ಶರ್ಮ ಭಾರಿಸಿದ ಸೊಗಸಾದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ

ಎರಡು ವಿಕೆಟ್ 312 ರನ್ ಗಳಿಸಿದೆ.143 ರನ್ ಬಾರಿಸಿದ ಯಶಸ್ವಿ ಜೈಸ್ವಾಲ್ ಹಾಗೂ 36 ರನ್ ಗಳಿಸಿದ ವಿರಾಟ್ ಕೊಹ್ಲಿ ಕ್ರೀಸ್ನಲ್ಲಿದ್ದಾರೆ. 103 ರನ್ ಗಳಿಸಿದ ರೋಹಿತ್ ಶರ್ಮ ಹಾಗೂ 6 ರನ್ ಗಳಿಸಿದ ಶುಭ್ಮನ್ ಗಿಲ್ ಔಟ್ ಆದರು. ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಮುಂದುವರಿಸಿದ ಭಾರತದ ಪರ ಜೈಸ್ವಾಲ್ ಹಾಗೂ ರೋಹಿತ್ ಮೊದಲ ವಿಕೆಟ್ಗೆ 229 ರನ್ ಭರ್ಜರಿ

ಜೊತೆಯಾಟ ಕಟ್ಟಿದರು. ಮೊದಲ ಟೆಸ್ಟ್ ಆಡುತ್ತಿರುವ ಜೈಸ್ವಾಲ್ 350 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ ಅಜೇಯ 143 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮ 221 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 103 ರನ್ ಬಾರಿಸಿದರು.
ವೆಸ್ಟ್ ಇಂಡೀಸ್ ಮೊದಲ ಇನ್ನೀಂಗ್ಸ್ನಲ್ಲಿ 150 ರನ್ಗೆ ಆಲೌಟ್ ಆಗಿತ್ತು. ಭಾರತ ಮೊದಲ ಇನ್ನೀಂಗ್ಸ್ನಲ್ಲಿ 8 ವಿಕೆಟ್ ಉಳಿದಿರುವಂತೆ 162 ರನ್ ಮುನ್ನಡೆ ಸಾಧಿಸಿದೆ.