ಬನಾರಿ: ದೇಲಂಪಾಡಿ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಗಣೇಶೋತ್ಸವದ ಪ್ರಯುಕ್ತ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ತಂಡದ ವತಿಯಿಂದ ‘ಶ್ರೀರಾಮಾನುಜ’ ಯಕ್ಷಗಾನ ತಾಳಮದ್ದಳೆ ನಡೆಯಿತು.ಹಿಮ್ಮೇಳದಲ್ಲಿ
ರಚನಾ ಚಿದ್ಗಲ್ಲು,ವಿಷ್ಣು ಶರಣ ಬನಾರಿ, ಕೃಷ್ಣಪ್ರಸಾದ ಬನಾರಿ ಸಹಕರಿಸಿದರು.ಅರ್ಥಧಾರಿಗಳಾಗಿ ಸರಿತಾ ದೇಲಂಪಾಡಿ, ಪವಿತ್ರ ಮುದಿಯರು,ವಿಜೇತ ಗೌಡ ಬಂದ್ಯಡ್ಕ, ನಳಿನಾಕ್ಷಿ ಗೌಡ ಮುದಿಯಾರು, ಜಾಲಜಾಕ್ಷಿ ರೈ ಬೆಳ್ಳಿಪ್ಪಾಡಿ, ಸುಜಾತಾ ರೈ ದೇಲಂಪಾಡಿ, ಶಾಂತಾಕುಮಾರಿ ದೇಲಂಪಾಡಿ, ಕುಸುಮಾ ಗೌಡ ಕುತ್ತಿಮುಂಡ, ಪ್ರೇಮ ಗೌಡ ಬಂದ್ಯಡ್ಕ, ಸುಮಲತಾ ರೈ ದೇಲಂಪಾಡಿ, ಶೀಲಾ ಗೌಡ ಕೇದಗಡಿ ಸಹಕರಿಸಿದರು. ನಾರಾಯಣ ದೇಲಂಪಾಡಿ ಅರ್ಥ ಸಾಹಿತ್ಯ ರಚಿಸಿದರು. ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ರಮಾನಂದ ರೈ ದೇಲಂಪಾಡಿ ಸಂಯೋಜನೆ ಮಾಡಿದ್ದರು.












