ಸುಳ್ಯ: ಸುಳ್ಯದ ರಂಗ ಮಯೂರಿ ಕಲಾಶಾಲೆಯ ವತಿಯಿಂದ ಜುಲೈ 6 ಶನಿವಾರ ಅಪರಾಹ್ನ 2ರಿಂದ ‘ಯಕ್ಷಗಾನದ ಒಂದು ಅವಲೋಕನ’ ಯಕ್ಷಗಾನ ಗೋಷ್ಠಿ ಮತ್ತು ತಾಳ ಮದ್ದಳೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.2.30ರಿಂದ 4.15ರ ತನಕ ಯಕ್ಷಗಾನ ಗೋಷ್ಠಿ ನಡೆಯಲಿದೆ. ಯಕ್ಷಗಾನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಮತ್ತು ಯಕ್ಷಗಾನ ಕಲಾವಿದರಾದ ಡಾ ಪ್ರಭಾಕರ ಶಿಶಿಲ ವಹಿಸಿ’ಯಕ್ಷಗಾನದ ಬೆಳವಣಿಗೆಯಲ್ಲಿ ಸಹಭಾಗಿತ್ವ ಎಂಬ ವಿಷಯದಲ್ಲಿ
ವಿಚಾರ ಮಂಡಿಸಲಿದ್ದಾರೆ.’ಯಕ್ಷಗಾನವನ್ನು ತಲೆಮಾರಿಗೆ ವರ್ಗಾಯಿಸುವ ಸಾಧ್ಯತೆಗಳು’ ಎಂಬ ವಿಚಾರದ ಬಗ್ಗೆ ಲೇಖಕರು ಹಾಗೂ ಸಂಶೋಧಕರಾದ ಡಾ.ಸುಂದರ ಕೇನಾಜೆ ವಿಚಾರ ಮಂಡಿಸಲಿದ್ದಾರೆ.
‘ಯಕ್ಷಗಾನ ಸಂಘಟನೆಯ ಸವಾಲುಗಳು ಮತ್ತು ಪರಿವಾರ’ ಎಂಬ ವಿಷಯದ ಬಗ್ಗೆ ಯಕ್ಷಗಾನ ಕಲಾವಿದರು ಹಾಗೂ ಸಂಘಟಕರಾದ
ನಾರಾಯಣ ದೇಲಂಪಾಡಿ ವಿಚಾರ ಮಂಡಿಸಲಿದ್ಸಾರೆ.
4.45ರಿಂದ 7.15ರ ತನಕ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಖ್ಯಾತ ಕಲಾವಿದರು ಭಕ್ತ ಸುಧನ್ವ (ಕವಿ : ಮೂಲಿಕೆ ರಾಮಕೃಷ್ಣಯ್ಯ) ಎಂಬ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಸುಬ್ರಾಯ ಸಂಪಾಜೆ,ಚೆಂಡೆ ವಾದಕರಾಗಿ ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಮದ್ದಲೆ ವಾದಕರಾಗಿ ಶ್ರೀಧರ ವಿಟ್ಲ ಭಾಗವಹಿಸುವರು
ಅರ್ಥದಾರಿಗಳಾಗಿ ಸುಧನ್ವನ ಪಾತ್ರದಲ್ಲಿ ರಾಧಾಕೃಷ್ಣ ಕಲ್ಚಾರ್, ಶ್ರೀಕೃಷ್ಣನ ಪಾತ್ರದಲ್ಲಿ ವೆಂಕಟ್ರಾಮ ಭಟ್ ಸುಳ್ಯ, ಅರ್ಜುನನಾಗಿ ಜಬ್ಬಾರ್ ಸಮೋ ಸಂಪಾಜೆ ಭಾಗವಹಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ರಂಗಮಯೂರಿ ಕಲಾ ಶಾಲೆಯ ನಿರ್ದೇಶಕರಾದ ಲೋಕೇಶ್ ಊರುಬೈಲ್ ಪತ್ರಿಕಾ ತಿಳಿಸಿದ್ದಾರೆ
(ಹೆಚ್ಚಿನ ಮಾಹಿತುಗಾಗಿ ಸಂಪರ್ಕಿಸಿ:9611355496, 6363783983)