ಸುಳ್ಯ: ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಯಕ್ಷ ಧ್ರುವ ಯಕ್ಷ ಶಿಕ್ಷಣ ಅಭಿಯಾನದ ಅಂಗವಾಗಿ ತೆಂಕುತಿಟ್ಟು ಯಕ್ಷಗಾನ ತರಗತಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿತು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷಪ್ರೊ. ಎಂ.ಎಲ್. ಸಾಮಗ ಆರತಿ ಬೆಳಗಿ ತರಗತಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ವಹಿಸಿದ್ದರು. ತರಬೇತಿ ಸಂಚಾಲಕರಾದ ವಾಸುದೇವ ಐತಾಳ್, ಪಟ್ಲ ಪೌಂಡೇಶನ್ ನ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀನಾಥ್ ರೈ ಹಾಗು ಕಾರ್ಯದರ್ಶಿಗಳಾದ ಪ್ರೀತಂ ರೈ, ಯಕ್ಷಗಾನ ಗುರುಗಳಾದ ಉಬರಡ್ಕ ಉಮೇಶ ಶೆಟ್ಟಿ, ಪ್ರಸಾದ್ ಸವಣೂರು, ಎಸ್.ಡಿ.ಎಮ್. ಸಿ ಸದಸ್ಯರಾದ ರೇಖಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಸುಂದರ ಕೇನಾಜೆ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮವನ್ನು ಕನ್ನಡ ಶಿಕ್ಷಕರಾದ ಮಮತಾ ಎಂ.ಜೆ. ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಚನಾ ಚಿದ್ಗಲ್, ಶ್ರೀ ವತ್ಸ ಭಾರದ್ವಾಜ್, ಪ್ರಥಮ ಮೂಡಿತ್ತಾಯ, ಜಯರಾಮ ಇವರ ತಂಡದಿಂದ ಯಕ್ಷಗಾನ ಪದ್ಯಗಳ ಹಾಡುಗಾರಿಕೆ ನಡೆಯಿತು. ಸುಮಾರು ಐದು ತಿಂಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಸುಮಾರು ನೂರಕ್ಕಿಂತಲೂ ಮೇಲ್ಪಟ್ಟ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ಕಲಿತು ಕೊನೆಯಲ್ಲಿ ವಿಶೇಷ ಪ್ರದರ್ಶನ ನೀಡಲಿದ್ದಾರೆ.