ಸುಳ್ಯ: ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ ವಿದ್ಯಾರ್ಥಿ ಯಜ್ನೇಶ್ ಕೆ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿವಿ ತಂಡದ ಬ್ಯಾಡ್ಮಿಂಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಯಜ್ಞೇಶ್ ವಿವಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಶ್ವವಿದ್ಯಾನಿಲಯದ
ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್ ಪಂದ್ಯಾಟವು ಜೈನ್ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿ ನಡೆಯಲಿದ್ದು, ಯಜ್ನೇಶ್ ಮಂಗಳೂರು ವಿಶ್ವದ್ಯಾನಿಲಯ ತಂಡವನ್ನು ಪ್ರತಿನಿಧಿಸಿ ಆಡಲಿದ್ದಾರೆ. ಬ್ಯಾಡ್ಮಿಂಟನ್ ಅಕಾಡೆಮಿ ಸುಳ್ಯ ಇದರ ಸಕ್ರೀಯ ಸದಸ್ಯರಾಗಿರುವ ಇವರು ಕಾನತ್ತಿಲ ನಿವಾಸಿ ದಿನಕರ ಹಾಗೂ ಜಯಂತಿ ದಂಪತಿಗಳ ಪುತ್ರ.
previous post