ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತ ಕ್ರಿಕೆಟ್ ತಂಡವು 296 ರನ್ ಗಳಿಸಿ ಸರ್ವಪತನ ಕಂಡಿದ್ದು, 173 ರನ್ಗಳ ಹಿನ್ನಡೆ ಅನುಭವಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದ್ದು ಒಟ್ಟು 296 ರನ್ ಮುನ್ನಡೆ ಸಾಧಿಸಿದೆ.
ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದ ಅಜಿಂಕ್ಯ ರಹಾನೆ ಹಾಗೂ ಕೆಳ
ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಶಾರ್ದೂಲ್ ಠಾಕೂರ್ ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಿಂದ ಪಾರು ಮಾಡಿದರು. ಇವರಿಬ್ಬರೂ 7ನೇ ವಿಕೆಟ್ ಪಾಲುದಾರಿಕೆಯಲ್ಲಿ ಶತಕದ ಜೊತೆಯಾಟವಾಡಿದ್ದು, ರೋಹಿತ್ ಶರ್ಮಾ ಪಡೆಯ ಮೊತ್ತ 300 ರನ್ ಸನಿಹಕ್ಕೆ ತಲುಪಲು ಸಾಧ್ಯವಾಯಿತು.ಎರಡನೇ ದಿನದಾಟದ ಅಂತ್ಯಕ್ಕೆ 151 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಶ್ರೀಕರ್ ಭರತ್ ಬೇಗನೇ ಓಟಾದರು. ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ 7ನೇ ವಿಕೆಟ್ ಪಾಲುದಾರಿಕೆಯಲ್ಲಿ 109 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
129 ಎಸೆತಗಳನ್ನು ಎದುರಿಸಿದ ರಹಾನೆ 89 ರನ್ ಕಲೆಹಾಕಿದರೆ, ಠಾಕೂರ್ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಅರ್ಧಶತಕ (51 ರನ್) ಗಳಿಸಿ ಔಟಾದರು.ಅಂತಿಮವಾಗಿ ರೋಹಿತ್ ಪಡೆಯ ಆಟ 296 ರನ್ಗಳಿಗೆ ಕೊನೆಗೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 469 ರನ್ ಕಲೆಹಾಕಿ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ123 ರನ್ ಗಳಿಸಿದೆ. ಇದರಿಂದ ಭಾರತ ಒಟ್ಟಾರೆ 296 ಹಿನ್ನಲೆಯಲ್ಲಿದೆ.