ಲಂಡನ್: ಭಾರತ ತಂಡದ ಅಗ್ರ ಬ್ಯಾಟರ್ಗಳು ಮುಗ್ಗರಿಸಿದ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಹಿನ್ನಡೆಯ ಭೀತಿ ಕಾಡಿದೆ. ಪಂದ್ಯದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 469 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ
ತಂಡವು 38ಓವರ್ಗಳಲ್ಲಿ 5 ವಿಕೆಟ್ಗಳಿಗೆ 151ರನ್ ಗಳಿಸಿದೆ. ರವೀಂದ್ರ ಜಡೇಜ (48), ಅಜಿಂಕ್ಯ ರಹಾನೆ (ಬ್ಯಾಟಿಂಗ್ 29) ಅವರು ಇನಿಂಗ್ಸ್ಗೆ ಬಲ ತುಂಬುವ ಪ್ರಯತ್ನ ನಡೆಸಿದರು. ಇದೀಗ ಭಾರತ 318 ರನ್ಗಳ ಹಿನ್ನಡೆಯಲ್ಲಿದೆ.ಭಾರತ ತಂಡಕ್ಕೆ ಉತ್ತಮ ಆರಂಭ ನೀಡಲು ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ವಿಫಲರಾದರು. 15 ರನ್ ಗಳಿಸಿದ ರೋಹಿತ್ ಶರ್ಮ, 13 ರನ್ ಗಳಿಸಿದ ಶುಭಮನ್ ಗಿಲ್ ಪೆವಿಲಿಯನ್ ಸೇರಿದರು. ತಲಾ 14 ಗಳಿಸಿದ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು.
ಜಡೇಜ ಮತ್ತು ರಹಾನೆ 5ನೇ ವಿಕೆಟ್ಗೆ 71 ರನ್ ಸೇರಿಸಿದರು.
ಇದಕ್ಕೂ ಮುನ್ನ ಟ್ರಾವಿಸ್ ಹೆಡ್ (163) ಹಾಗೂ ಸ್ಟೀವನ್ ಸ್ಮಿತ್(121) ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನೀಂಗ್ಸ್ನಲ್ಲಿ 469 ರನ್ ಗಳಿಸಿತು. ಅಲೆಕ್ಸ್ ಕ್ಯಾರಿ 48 ರನ್ ಗಳಿಸಿದರು. ಭಾರತದ ಪರ ಮಹಮ್ಮದ
ಸಿರಾಜ್ ನಾಲ್ಕು ವಿಕೆಟ್ ಗಳಿಸಿದರು. ಮಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಪಡೆದರು.