ನವದೆಹಲಿ: ಭಾರತದ ಆರ್. ಪ್ರಜ್ಞಾನಂದ ಹಾಗೂ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್ಸೆನ್ ಅವರ ಮಧ್ಯೆ ನಡೆದ ಚೆಸ್ ವಿಶ್ವಕಪ್ನ ಫೈನಲ್ ಪಂದ್ಯದ ಮೊದಲ ಗೇಮ್ ಡ್ರಾನಲ್ಲಿ ಅಂತ್ಯಗೊಂಡಿದೆ. ಎರಡನೇ
ಪಂದ್ಯ ಇಂದು ನಡೆಯಲಿದೆ. ಮೊದಲ ಗೇಮ್ 35 ನಡೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.90 ನಿಮಿಷಗಳ ಮೊದಲ ಸುತ್ತಿನಲ್ಲಿ ಪ್ರಜ್ಞಾನಂದ ಜಾಣ ನಡೆಗಳ ಮೂಲಕ ಮೇಲುಗೈ ಸಾಧಿಸಿದ್ದರೂ ಬಳಿಕ ರಕ್ಷಾಣತ್ಮಕ ಆಟಕ್ಕೆ ಒತ್ತು ನೀಡಿದರು. ಈ ಪಂದ್ಯದ ಎರಡನೇ ಕ್ಲಾಸಿಕಲ್ ಗೇಮ್ ಇಂದು ನಡೆಯಲಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಕೆಗಳೊಂದಿಗೆ ಸ್ಪರ್ಧಿಸಿದ್ದ ಪ್ರಜ್ಞಾನಂದ ಇಂದು ಕಪ್ಪು ಕಾಯಿಕೆಗಳೊಂದಿಗೆ ಚದುರಂಗ ಆಡಲಿದ್ದಾರೆ.