ಸುಳ್ಯ:ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.ನ್ಯಾಷನಲ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಕನ್ಯಾಕುಮಾರಿ ತಮಿಳುನಾಡು ಹಾಗೂ ಚತುರ್ಥ ಸ್ಥಾನ ಪಾಂಡಿಚೇರಿ ಪಡೆದುಕೊಂಡಿತು. 4 ತಂಡಗಳು ಭಾಗವಹಿಸಿದ್ದ ಮಹಿಳಾ ವಿಭಾಗದ ಪಂದ್ಯದ ಲೀಗ್ ವಿಭಾಗದ ಅಂತಿಮ ಪಂದ್ಯದಲ್ಲಿ

ರೋಚಕ ಹಣಾಹಣಿಯಲ್ಲಿ ಟಿಎಂಸಿ ಥಾಣೆ ತಂಡ 37-35 ಅಂಕಗಳ ಅಂತರದಲ್ಲಿ ನ್ಯಾಷನಲ್ ಬೆಂಗಳೂರು ತಂಡವನ್ನು ಸೋಲಿಸಿತು. ಈ ಮೂಲಕ ಲೀಗ್ ಹಂತದಲ್ಲಿ 3 ಜಯ ದಾಖಲಿಸಿದ ಟಿಎಂಸಿ ಥಾಣೆ ಪ್ರಥಮ ಸ್ಥಾನಿಯಾಗಿ
ಚಾಂಪಿಯನ್ ಪಟ್ಟ ಅಲಂಕರಿಸಿತು.ಲೀಗ್ ಹಂತದಲ್ಲಿ ಎರಡು ಜಯ ದಾಖಲಿಸಿದ ನ್ಯಾಷನಲ್ಸ್ ಬೆಂಗಳೂರು ದ್ವಿತೀಯ ಸ್ಥಾನಿಯಾಯಿತು.ಮಹಿಳೆಯರ ವಿಭಾಗದ ಲೀಗ್ ಹಂತದ ಮತ್ತೊಂದು ಪಂದ್ಯದಲ್ಲಿ ಕನ್ಯಾಕುಮಾರಿ ತಮಿಳುನಾಡು ತಂಡ ಪಾಂಡಿಚೇರಿ ತಂಡವನ್ನು 19-13 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿತು. ಲೀಗ್ ಹಂತದಲ್ಲಿ ಒಂದು


ನ್ಯಾಷನಲ್ಸ್ ಬೆಂಗಳೂರು ತಂಡ
ಜಯ ದಾಖಲಿಸಿದ ತಮಿಳುನಾಡು ತಂಡ ತೃತೀಯ ಸ್ಥಾನ ಪಡೆದುಕೊಂಡರೆ, ಪಾಂಡಿಚೇರಿ ಚತುರ್ಥ ಸ್ಥಾನ ಪಡೆದುಕೊಂಡಿತು. ಬೆಸ್ಟ್ ರೈಡರ್ ಆಗಿ ನ್ಯಾಷನಲ್ಸ್ ಬೆಂಗಳೂರು ತಂಡದ ಶ್ರೀಲಕ್ಷ್ಮಿ , ಬೆಸ್ಟ್ ಡಿಫೆಂಡರ್ ಆಗಿ ನ್ಯಾಷನಲ್ಸ್ ಬೆಂಗಳೂರಿನ ವೃಂದಾ, ಬೆಸ್ಟ್ ಆಲ್ ರೌಂಡರ್ ಅಗಿ ಟಿಎಂಸಿ ಥಾಣೆಯ ಮಾಧುರಿ ಆಯ್ಕೆಯಾಗಿದ್ದಾರೆ.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.









