ಸಂಪಾಜೆ:ಸಂಪಾಜೆಯಲ್ಲಿ ಕಾಡಾನೆಯೊಂದು ಮುಖ್ಯ ರಸ್ತೆಯಲ್ಲಿಯೇ ನಡೆದುಕೊಂಡು ಸಾಗಿದ ದೃಶ್ಯದ ವೀಡಿಯೋ ಒಂದು ವೈರಲ್ ಆಗಿದೆ. ಕಾಡಾನೆ ಮುಖ್ಯ ರಸ್ತೆಯಲ್ಲಿ ಸಾಗಿ ತೋಟಕ್ಕೆ ನುಗ್ಗಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ
ಸೆರೆಯಾಗಿದೆ.ಕಾಡಾನೆ ಮುಖ್ಯರಸ್ತೆಯಾಗಿ ಸಂಚರಿಸಿ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಬೆಳೆ ನಾಶಪಡಿಸಿದೆ .ಮುಖ್ಯ ರಸ್ತೆಯಾಗಿ ಸಂಚರಿಸಿದ ಆನೆ ಬಳಿಕ ರಸ್ತೆ ಪಕ್ಕದ ಬೇಲಿ ಮುರಿದು ಬಾಳೆ , ಕೊಕ್ಕೋ ಕೃಷಿ ಹಾನಿ ಮಾಡಿಧು, ಹೊಳೆ ಬದಿಯಲ್ಲಿ ಇದ್ದ ಬೈನೆ ಮರವನ್ನು ಮುರಿದಿದೆ. ವಿವಿಧ ಕಡೆ ಕೃಷಿ ಹಾನಿ ಮಾಡಿದೆ.
.