ಸುಳ್ಯ: ಟ್ಯಾಪಿಂಗ್ ಮಾಡಲು ರಬ್ಬರ್ ತೋಟಕ್ಕೆ ತೆರಳಿದ್ದ ಮಹಿಳೆಯ ಮೇಲೆ ಕಾಡುಹಂದಿ ದಾಳಿ ಮಾಡಿ ತೀವ್ರ ಗಾಯಗೊಳಿಸಿದ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಕೂಟೇಲಿನಿಂದ ವರದಿಯಾಗಿದೆ. ಕೂಟೇಲು ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ
ಟ್ಯಾಪರ್ ಆಗಿದ್ದು ಅವರು ಇಂದು ಮುಂಜಾನೆ ದುಗಲಡ್ಕ ಸೆಕ್ಷನಿನ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ಧಾಳಿ ನಡೆಸಿದೆ. ಕಾಡು ಹಂದಿಯ ದಾಳಿಯಿಂದ ಮಹಿಳೆಯ ಬೆನ್ನು ಮತ್ತಿತರೆಡೆಗೆ ತೀವ್ರ ಗಾಯಗಳಾಗಿದೆ.
ಗಾಯಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.