ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ವಲಯ ಪರಿವಾರಕಾನ ಒಕ್ಕೂಟ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವೀಲ್ ಚೆಯರ್ ವಿತರಣಾ ಕಾರ್ಯಕ್ರಮ ಸರಳಿಕುಂಜ ಧರ್ಮಾರಣ್ಯದ
ಶ್ರೀ ಗುರುಗಣಪತಿ ಸಭಾಭವನದಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವೀಲ್ ಚೆಯರನ್ನು ಫಲನುಭವಿಗಳಿಗೆ ವಿತರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕನಾಥ ಅಮೆಚೂರು, ಬಾಲಚಂದ್ರ ಪಿ. ಟಿ, ಗೋಪಾಲಕೃಷ್ಣ ಭಟ್ ಪೈಚಾರು, ಶ್ರೀಪತಿ ಭಟ್ ಮಜಿಗುಂಡಿ, ಕೃಷ್ಣ ಬೆಟ್ಟ, ಜಗದೀಶ್ ಸರಳಿಕುಂಜ, ನಿತ್ಯಾನಂದ ಕಲ್ಲೆಂಬಿ, ಪಿ.ಜಿ. ಜಯರಾಮ, ವಿಜಯ ಸರಳಿಕುಂಜ, ಗಣೇಶ್ ಬಿ ಹಾಗೂ ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.