ಹೊಸದಿಲ್ಲಿ: ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪ್ರಮುಖ ಸಾಮಾಜಿಕ ಜಾಲತಾಣ, ಜನಪ್ರಿಯ ಸಂವಹನ ಮಾಧ್ಯಮವಾದ ವಾಟ್ಸಾಪ್ ಸ್ಥಗಿತಗೊಂಡಿತ್ತು. ಇದರಿಂದ ಯಾವುದೇ ಮೆಸೇಜ್ ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಆಗದೆ ಬಳಕೆದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 12.30ರ ಬಳಿಕ ವಾಟ್ಸಾಪ್‌ನಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಒಂದುವರೆ ಗಂಟೆಗಳ ಬಳಿಕ ಎರಡು ಗಂಟೆಯ ಬಳಿಕ ಸೇವೆ ಮರು ಸ್ಥಾಪನೆಗೊಂಡಿದೆ.
ಈ ಹಿಂದೆಯೂ ಕೆಲ ಬಾರಿ ವಾಟ್ಸಪ್ ಸರ್ವರ್ ಡೌನ್ ಆಗಿದ್ದು, ಕೆಲ ಸಮಯಗಳ ಬಳಿಕ ಅದನ್ನು ಮರುಸ್ಥಾಪಿಸಲಾಗಿತ್ತು. ವಾಟ್ಸಾಪ್ ಸ್ಥಗಿತಗೊಂಡ ಬಗ್ಗೆ ಟ್ವಿಟ್ಟರ್ ಮತ್ತಿತರ ಸಾಮಾಜಿಕ ತಾಣದಲ್ಲಿ ಹಲವು ಬಳಕೆದಾರರು ಸಂದೇಶಗಳನ್ನು ಹಂಚಿಕೊಂಡಿದ್ದಾರೆ.