ನವದೆಹಲಿ: ಮೆಸೆಂಜರ್ ಆ್ಯಪ್ ವಾಟ್ಸ್‌ಆ್ಯಪ್ ‘ಕಮ್ಯುನಿಟಿ’ ಎಂಬ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದ್ದು, ಹೆಚ್ಚು ಜನರಿರುವ ದೊಡ್ಡ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲು ಅನುವು ಮಾಡಿಕೊಡುತ್ತಿದೆ. ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ
ಇನ್–ಚಾಟ್ ಪೋಲ್ ದಂಥ ವಿಶೇಷತೆಗಳನ್ನೂ ವಾಟ್ಸ್‌ಆ್ಯಪ್ ನೀಡುತ್ತಿದೆ. ವಾಟ್ಸ್‌ಆ್ಯಪ್‌ನ ಮಾಲೀಕ ಸಂಸ್ಥೆ ಮೆಟಾ ಈ ಬಗ್ಗೆ ಮಾಹಿತಿ ನೀಡಿದೆ.ವಿವಿಧ ಚಾಟ್ ಗುಂಪುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ‘ವಾಟ್ಸ್‌ಆ್ಯಪ್ ಕಮ್ಯುನಿಟಿ’ಯ ವಿಶೇಷತೆಯಾಗಿದೆ. ಇದರ ಮೂಲಕ ಸಾವಿರಾರು ಮಂದಿಗೆ ಒಂದೇ ಬಾರಿಗೆ ಸಂದೇಶ ರವಾನಿಸಬಹುದು.ಇನ್ನುಮುಂದೆ, ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ 1,024 ಮಂದಿಯನ್ನು ಸೇರಿಸಿಕೊಳ್ಳಬಹುದು. ಈ ವರೆಗೆ ಗ್ರೂಪ್‌ಗಳಲ್ಲಿ 512 ಮಂದಿಯನ್ನು ಸೇರಿಸಲಷ್ಟೇ ಅವಕಾಶವಿತ್ತು.32 ಮಂದಿಗೆ ಒಂದೇ ಬಾರಿಗೆ ವಿಡಿಯೊ ಕರೆ ಮಾಡುವ ವಿಶೇಷತೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಸೇರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿರುವಂತೆ ಅಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆಯನ್ನೂ ಚಾಲ್ತಿಗೆ ತರಲಾಗುತ್ತಿದೆ ಎಂದು ಮೆಟಾ ಹೇಳಿದೆ.