ಮಂಗಳೂರು: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಕಛೇರಿಯಿಂದ ತೂಕ, ಅಳತೆ ಮತ್ತು ತೂಕದ ಸಾಧನಗಳ 2025 ನೇ ಸಾಲಿನ ವಾರ್ಷಿಕ ಸತ್ಯಾಪನೆ ಮುದ್ರೆ ಶಿಬಿರವು ಸುಳ್ಯ ಗಾಂಧಿನಗರದ ಸರ್ಕಾರಿ ಪ್ರೌಢಶಾಲೆ ಮೈದಾನದ ಎದುರುಗಡೆ ಇರುವ ತೌಸೀಫ್ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭವಾಗಿದೆ. ಸುಳ್ಯ ಶಿಬಿರ ವ್ಯಾಪ್ತಿಯಲ್ಲಿನ
ಜಾಲ್ಸೂರು, ಸುಳ್ಯ, ಅಜ್ಜಾವರ, ಕಲ್ಲುಗುಂಡಿ, ಕುಕ್ಕುಜಡ್ಕ, ದೊಡ್ಡತೋಟ, ಎಲಿಮಲೆ, ಮಂಡೆಕೋಲು, ಸಂಪಾಜೆ, ಉಬರಡ್ಕ, ಉಬರಡ್ಕ ಮಿತ್ತೂರು, ಕನಕಮಜಲು, ಮಕರ್ಂಜ, ತೋಡಿಕಾನ, ಅರಂತೋಡು, ಕೋಡಿಯಾಳ, ಆಲೆಟ್ಟಿ ವ್ಯಾಪ್ತಿಯ ವ್ಯಾಪಾರಸ್ಥರು ಮತ್ತು ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ, ಅಳತೆ ಮತ್ತು ತೂಕದ ಸಾಧನಗಳನ್ನು ಶಿಬಿರ ಕಛೇರಿಗೆ ಸತ್ಯಾಪನೆ ಮುದ್ರೆ ಮಾಡಿಸಬೇಕು. ಪ್ರತಿ ಬುಧವಾರ ಶಿಬಿರ ನಡೆಯಲಿದೆ. ನವೆಂಬರ್ 5 ರಂದು ಮುಕ್ತಾಯಗೊಳ್ಳುತ್ತದೆ ಎಂದು ಪುತ್ತೂರು ಉಪವಿಭಾಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





