ಕೋಲ್ಕತಾ:ವಿಶ್ವಕಪ್ ಸೆಮಿ ಫೈನಲ್ ಹಾದಿ ದುರ್ಗಮವಾಗಿರುವ ಪಾಕಿಸ್ತಾನ ಇಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಮಾಡು-ಮಡಿ ಪಂದ್ಯದಲ್ಲಿ ಸತತ ಸೋಲಿನಿಂದ ಹೊರ ಬರುವ ವಿಶ್ವಾಸದಲ್ಲಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ 6 ಪಂದ್ಯಗಳಲ್ಲಿ 4 ಅಂಕ ಗಳಿಸಿ ಆರನೇ
ಸ್ಥಾನದಲ್ಲಿದೆ. ಉಳಿದ 3 ಪಂದ್ಯಗಳನ್ನು ಗೆಲ್ಲುವ ತವಕದಲ್ಲಿದೆ. ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್ ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಪಾಕಿಸ್ತಾನ ಮುಂದಿನ ಸುತ್ತಿಗೇರುವ ಅಲ್ಪ ವಿಶ್ವಾಸವನ್ನು ಉಳಿಸಿಕೊಳ್ಳಲು ಗೆಲುವಿನ ಜೊತೆಗೆ ನೆಟ್ ರನ್ರೇಟ್ ಹೆಚ್ಚಿಸಿ ಕೊಳ್ಳಬೇಕಾಗಿದೆ. ನಾಯಕ ಬಾಬರ್ ಆಝಂ ಅವರು 3 ಅರ್ಧಶತಕ ಗಳಿಸಿದ್ದು, ಉತ್ತಮ ಮೊತ್ತ ಪೇರಿಸಿರುವ ಮಹಮ್ಮದ್ ರಿಝ್ವಾನ್, 6 ಪಂದ್ಯದಲ್ಲಿ 13 ವಿಕೆಟ್ ಪಡೆದಿರುವ ಶಾಹಿನ್ ಶಾ ಅಫ್ರಿದಿ ಫಾರ್ಮ್ನಲ್ಲಿದ್ದಾರೆ.
ಮತ್ತೊಂದೆಡೆ ನೆದರ್ಲ್ಯಾಂಡ್ಸ್ ವಿರುದ್ಧ 87 ರನ್ನಿಂದ ಸೋತಿರುವ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಈ ತನಕ ಆಡಿರುವ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿದೆ.