ವಯನಾಡ್: ವಯನಾಡಿನ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಸಾಂತ್ವನ ಹೇಳಿದರು. ಚುರಲ್ಮಲಾ ಭೂಕುಸಿತದಲ್ಲಿ ಗಾಯಗೊಂಡು ಮೆಪ್ಪಾಡಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿರುವ ನೈಸಾ (3) ಎಂಬ ಬಾಲಕಿಯನ್ನು ಮೋದಿಯವರು ಭೇಟಿ ಮಾಡಿದರು. ನೈಸಾ ಮತ್ತು ತಾಯಿ ಜೆಸಿಲಾ ಅವರನ್ನು ಭೇಟಿ ಮಾಡಿ ಮಾತನಾಡಿದರು. ನೈಸಾಗೆ ಉಳಿದಿರುವುದು ತಾಯಿ ಮಾತ್ರ. ದುರಂತದಲ್ಲಿ ಗಾಯಗೊಂಡ ನೈಸಳನ್ನು ಸಂಬಂಧಿ ಮಹಿಳೆ ರಕ್ಷಿಸಿ ಆಸ್ಪತ್ರೆ ಸೇರಿಸಿದ್ದರು. ಬಳಿಕ ತಾಯಿ ಜೆಸಿಲಾ ಗಂಭೀರವಾಗಿ ಗಾಯಗೊಂಡ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿತು. ದುರಂತದಲ್ಲಿ ಇವರ ಕುಟುಂಬ ಹಲವರನ್ನು ಕಳೆದುಕೊಂಡಿದ್ದಾರೆ. ಈಗ ನೈಸಾ ಮತ್ತು ತಾಯಿ ಜೆಸಿಲಾ ಆಸ್ಪತ್ರೆಯಲ್ಲಿ ಒಟ್ಟಿಗೆ ಇದ್ದಾರೆ.
ಕೆಸರಿನಲ್ಲಿ ಮುಳುಗಿ ಹೋಗಿದ್ದು ರಕ್ಷಣಾ ಕಾರ್ಯಕರ್ತರು ರಕ್ಷಣೆ ಮಾಡಿ ಚಿಕಿತ್ಸೆಯಲ್ಲಿರುವ ಅರುಣ್, ಚಿಕಿತ್ಸೆಯಲ್ಲಿರುವ ಆವಂತಿಕ, ಅನಿಲ್, ರಸೀನಾ ಮತ್ತಿತರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆದರು.