ಕಲ್ಪಟ್ಟ: ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿ ಸರಕಾರ ನಿರ್ಮಿಸಿದ ಮೊದಲ ಹಂತವಾಗಿ 178 ಮನೆಗಳನ್ನು ಸರ್ಕಾರ ಹಸ್ತಾಂತರ ಮಾಡಿದೆ.2024ರ ಜುಲೈನಲ್ಲಿ ವಯನಾಡ್ನ ಮೇಪ್ಪಾಡಿ ಪಂಚಾಯತ್ನ ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ
350ಕ್ಕೂ ಅಧಿಕ ಮೆನೆಗಳು ಕೊಚ್ಚಿಹೋಗಿದ್ದವು. ಸಂತ್ರಸ್ತ ಕುಟುಂಬಗಳಿಗೆ ಕಲ್ಪೆಟ್ಟ ಬೈಪಾಸ್ ಬಳಿಯ ಎಲ್ಸ್ಟನ್ ಎಸ್ಟೇಟ್ ಪ್ರದೇಶದಲ್ಲಿ ‘ಟೌನ್ಶಿಪ್’ ನಿರ್ಮಿಸಲಾಗುತ್ತಿದೆ.ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿರುವ ಮನೆ
64.4 ಎಕರೆ ಪ್ರದೇಶದಲ್ಲಿ 351 ಕೋಟಿ ವೆಚ್ಚದಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 178 ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಶೀಘ್ರವೇ ಉಳಿದ ಮನೆಗಳು ಸಿದ್ಧವಾಗಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪ್ರತಿ ಮನೆಯು 1,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 7 ಸೆಂಟ್ ಜಮೀನಿನಲ್ಲಿ ನಿರ್ಮಿಸಲಾಗಿದೆ. ಈ ಮನೆ ಮತ್ತು ಜಮೀನಿನ ಮಾಲೀಕತ್ವವನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಪ್ರತಿ ಮನೆಗಳಲ್ಲಿ ಒಂದು ಮಾಸ್ಟರ್ ಸಹಿತ 3 ಬೆಡ್ರೂಂಗಳು, ಒಂದು ಹಾಲ್, ಅಡುಗೆ ಕೋಣೆ ಅದಕ್ಕೆ ಹೊಂದಿಕೊಂಡಂತೆ ಸ್ಟೋರ್ ರೂಂ, ಶೌಚಾಲಯ, ಸಿಟ್ಔಟ್ ಒಳಗೊಂಡಿದೆ. ಭವಿಷ್ಯದಲ್ಲಿ ಎರಡನೇ ಮಹಡಿ ನಿರ್ಮಿಸಲು ಅನುಕೂಲವಾಗುವಂತೆ ಈ ಮನೆಗಳ ಅಡಿಪಾಯವನ್ನು ಬಲಪಡಿಸಲಾಗಿದೆ.

ಪ್ರತಿ ಮನೆಯ ಮೇಲ್ಛಾವಣಿಯಲ್ಲಿ ನೆಟ್-ಮೀಟರಿಂಗ್ ವ್ಯವಸ್ಥೆಯಡಿ 2 ಕಿಲೋವ್ಯಾಟ್ ಸೌರ ವಿದ್ಯುತ್ ಘಟಕವನ್ನು ಅಳವಡಿಸಲಾಗಿದೆ.
ಉಳಿದ ವಸತಿ ಸಮುಚ್ಚಯ ಪೂರ್ಣಗೊಳಿಸುವುರ ಜೊತೆಗೆ
ಟೌನ್ಶಿಪ್ನೊಳಗೆ ಜನರಲ್ ಆಸ್ಪತ್ರೆ,ಅಂಗನವಾಡಿ ಕೇಂದ್ರ
ಸಾರ್ವಜನಿಕ ಮಾರುಕಟ್ಟೆ ಸಂಕೀರ್ಣ,ಗ್ರಂಥಾಲಯ, ಬಯಲು ರಂಗಮಂದಿರ, ಫುಟ್ಬಾಲ್ ಮೈದಾನ ಮತ್ತು ಸಮುದಾಯ ಭವನ ನಿರ್ಮಿಸಲಾಗುತ್ತದೆ.









