ವಯನಾಡು: ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಕೆಲವು ಕಡೆ ನಿಗೂಢ ಶಬ್ದ ಕೇಳಿ ಬಂದಿರುವ ಘಟನೆ ಸಂಭವಿಸಿದ್ದು ಜನರಲ್ಲಿ ಆತಂಕ ಸೃಷ್ಟಿಯಾಯಿತು. ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಭೂಮಿಯಿಂದ ಹಲವರು ಬಾರಿ ನಿಗೂಢ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ. ದೊಡ್ಡ ಶಬ್ದ ಉಂಟಾಗಿ
ಭೂಮಿ ಕಂಪಿಸಿದ ಅನುಭವವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ವಯನಾಡ್, ಕೋಝಿಕೋಡ್, ಪಾಲಕ್ಕಾಡ್ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಈ ರೀತಿಯ ಶಬ್ದ ಕೇಳಿ ಬಂದಿದೆ ಎಂದು ವರದಿಯಾಗಿದೆ.
ಭೂಕಂಪ ಸಂಭವಿಸಿರುವ ಬಗ್ಗೆ ಯಾವುದೇ ನಿದರ್ಶನ ಆಥವಾ ಕುರುಹುಗಳು ಸಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 10:15ರ ಸುಮಾರಿಗೆ ಶಬ್ದ ಕೇಳಿಸಿತು ಎಂದು ಜನರು ತಿಳಿಸಿದ್ದಾರೆ.
ಈಚೆಗೆ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತ ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ, ಹಲವರು ನಾಪತ್ತೆಯಾಗಿದ್ದಾರೆ ಈ ಮಧ್ಯೆ ನಿಗೂಢ ಶಬ್ದ ಕೇಳಿ ಬಂದಿರುವುದು ಆತಂಕ ಸೃಷ್ಠಿಸಿತು.