ಸುಳ್ಯ:ಸುಳ್ಯದ ನಗರ ಪಂಚಾಯತ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಯುದ್ಧ ಸ್ಮಾರಕ’ ಲೋಕಾರ್ಪಣಾ ಕಾರ್ಯಕ್ರಮ, ಯುದ್ಧ ಸ್ಮಾರಕಕ್ಕೆ ಗೌರವಾರ್ಪಣೆ ಹಾಗೂ ದೇಶ ಭಕ್ತಿ ಗೀತ ಗಾಯನ ಕಾರಗಯಕ್ರಮ ಜ.25ರಂದು ಸಂಜೆ ನಡೆಯಿತು.
ಮಾಜಿ ಸಚಿವ ಎಸ್.ಅಂಗಾರರು ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು ದೇಶಭಕ್ತಿಯನ್ನು ಉದ್ದೀಪನಗೊಳಿಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ತಮ್ಮ ಪ್ರಾಣವನ್ನೇ ಅರ್ಪಿಸಿ ದೇಶ ರಕ್ಷಣೆ ಮಾಡುವ ಸೈನಿಕರನ್ನು ಹಾಗೂ
ಅವರ ಕುಟುಂಬದವನ್ನು ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರು ಸೈನಿಕರು. ಯುದ್ಧ ಸ್ಮಾರಕವು ಎಲ್ಲರಿಗೂ ಪ್ರೇರಣೆಯಾಗಲಿ. ನಮ್ಮ ಪ್ರತಿ ಮನೆಯಲ್ಲಿಯೂ ಯೋಧರು ಹುಟ್ಟುವಂತಾಗಲಿ ಎಂದು ಅವರು ಹೇಳಿದರು.

ಮಂಗಳೂರು ಯುನಿವರ್ಸಿಟಿ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಕರ್ನಲ್ ಎನ್.ಎಸ್.ಭಂಡಾರಿ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಯುದ್ಧ ಸ್ಮಾರಕಕ್ಕೆ ಗೌರವಾರ್ಪಣೆ ಸಲ್ಲಿಸಿದರು.
ಕರ್ನಲ್ ಎನ್.ಎಸ್.ಭಂಡಾರಿ ಮಾತನಾಡಿ ಯುವ ಜನತೆಗೆ ಯುದ್ಧ ಸ್ಮಾರಕ ಸ್ಪೂರ್ತಿಯಾಗಲಿ ಎಂದರು.
ಡಾ.ಕೆ.ವಿ.ಚಿದಾನಂದ ಮಾತನಾಡಿ ‘ ಸೈನಿಕರು ಮತ್ತು ರೈತರು ಇಲ್ಲದಿದ್ದರೆ ನಮಗೆ ಬದುಕಲು ಸಾಧ್ಯವಿಲ್ಲ. ಅದುದರಿಂದ ನಮಗೆ ರಕ್ಷಣೆ ನೀಡುವ ಸೈನಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು.

ಸುಳ್ಯ ತಹಶೀಲ್ದಾರ್, ನಗರ ಪಂಚಾಯತ್ ಆಡಳಿತಾಧಿಕಾರಿ ಜಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್, ಸುಳ್ಯ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಅಡ್ಡಂತಡ್ಕ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ,
ಸುಳ್ಯ ತಾಲೂಕು ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ.ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರ ಪಂಚಾಯತ್ ಸದಸ್ಯರಾದ ಸುಧಾಕರ ಕುರುಂಜಿಭಾಗ್, ಬುದ್ದ ನಾಯ್ಕ, ಬಾಲಕೃಷ್ಣ ಭಟ್ ಕೊಡೆಂಕಿರಿ, ನಾರಾಯಣ ಶಾಂತಿನಗರ, ಶರೀಫ್ ಕಂಠಿ, ಶಶಿಕಲಾ ನೀರಬಿದಿರೆ, ಪೂಜಿತಾ ಕೆ.ಯು., ಸುಶೀಲಾ ಕಲ್ಲುಮುಟ್ಲು, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಶೀಲಾ ಕುರುಂಜಿ, ಪ್ರವಿತಾ ಪ್ರಶಾಂತ್, ಸರೋಜಿನಿ ಪೆಲತಡ್ಕ, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್.ಸುಧಾಕರ , ಸೈನಿಕರ ಸಂಘದ ಕಾರ್ಯದರ್ಶಿ ಮೋನಪ್ಪ ಗೌಡ ಅಡ್ಕಬಳೆ, ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಅವರ ಮನೆಯವರು ಕಾರ್ಯಕ್ರಮದಲ್ಲಿ ಇದ್ದರು.
ಸುಳ್ಯ ಎನ್ನೆಂಸಿ ಎನ್.ಸಿ.ಸಿ. ವಿದ್ಯಾರ್ಥಿಗಳು ಬ್ಯಾಂಡ್ – ವಾದ್ಯದಲ್ಲಿ ಸಹಕರಿಸಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಸ್ವಾಗತಿಸಿ, ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಂದಿಸಿದರು. ಶ್ರೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.








