ಸುಳ್ಯ:ಮಳೆ ತೀವ್ರ ಹೆಚ್ಚಾಗಿದ್ದು ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರೂ ಸುಳ್ಯ ನಾಗಪಟ್ಟಣದಲ್ಲಿರುವ ವೆಂಟೆಡ್ ಡ್ಯಾಮ್ನ ಷಟರ್ ಪೂರ್ತಿಯಾಗಿ ತೆರೆಯಲಿಲ್ಲ. ಇದರಿಂದ ಸಾರ್ವಜನಿಕಲ್ಲಿ ಆತಂಕ ಉಂಟಾಗಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಡ್ಯಾಂನಲ್ಲಿ ಬೇಸಿಗೆಯಲ್ಲಿ ಷಟರ್ ಹಾಕಿ ನೀರು ಶೇಖರಣೆ ಮಾಡಲಾಗುತ್ತದೆ. ಮಳೆಗಾಲ ಅರಂಭವಾದೊಡನೆ

ಷಟರ್ಗಳು ತೆರೆಯಲಾಗುತ್ತದೆ. ಅದರಂತೆ ಡ್ಯಾಮ್ನ ಷಟರ್ ತೆರವು ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆ ಹಾಗೂ ನಗರ ಪಂಚಾಯತ್ 10 ದಿನದ ಹಿಂದೆ ಮಾಹಿತಿ ನೀಡಿತ್ತು. ಕಳೆದ ಭಾನುವಾರ ಷಟರ್ ತೆರೆಯಲು ಆರಂಭಿಸಿದ್ದರು.ಆದರೆ 14 ಷಟರ್ಗಳ ಪೈಕಿ ಕೇವಲ 4 ಷಟರ್ಗಳನ್ನು ಮಾತ್ರ ಪೂರ್ತಿ ತೆರೆಯಲಾಗಿದೆ. ಎರಡು ಅರ್ಧಕ್ಕೆ ತೆರೆಯಲಾಗಿದೆ.ಉಳಿದ ಷಟರ್ಗಳನ್ನು ತೆರೆಯಲಾಗಿಲ್ಲ.
ಇದೀಗ ಮಳೆ ಹೆಚ್ಚಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಎಲ್ಲಾ ಷಟರ್ಗಳನ್ನು ತೆರೆದು ನದಿಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೇಸಿಗೆಯಲ್ಲಿ ಎಲ್ಲಾ 14 ಷಟರ್ಗಳನ್ನು ಹಾಕಿ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಇದೀಗ ಮಳೆಗಾಲ ಆರಂಭಗೊಂಡ ಹಿನ್ನಲೆಯಲ್ಲಿ ಎಲ್ಲಾ ಷಟರ್ಗಳನ್ನು ಓಪನ್ ಮಾಡಲಾಗುತ್ತದೆ.
‘ಇದೀಗ ನದಿಯಲ್ಲಿ ನೀರಿನ ಹರಿವು ಹೆಚ್ಚಳ ಆಗಿರುವ ಹಿನ್ನಲೆಯಲ್ಲಿ ಎಲ್ಲಾ ಷಟರ್ಗಳನ್ನು ತೆರೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಯಾವುದೇ ಅವಘಡ ಆಗದಂತೆ ಮುಂಜಾಗೃತಾ ಕ್ರಮ ವಹಿಸುವುದು ಅತೀ ಅಗತ್ಯವಾಗಿದೆ. ಈ ವಿಚಾರವನ್ನು ತಾಲೂಕು ಆಡಳಿತ ಹಾಗು ನಗರಾಡಳಿತದ ಗಮನಕ್ಕೆ ತರಲಾಗುವುದು.
-ರಾಧಾಕೃಷ್ಣ ಪರಿವಾರಕಾನ
ಮಾಜಿ ಅಧ್ಯಕ್ಷರು
ಆಲೆಟ್ಟಿ ಗ್ರಾ.ಪಂ.





