ಸುಳ್ಯ: ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (VTU) ಉಪಕುಲಪತಿಗಳ ನಿರ್ದೇಶನದಂತೆ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಮತ್ತು ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾದ ಡಾ. ಉಜ್ವಲ್ ಯು.ಜೆ. ಊರುಬೈಲು ಅವರು ವಿಶ್ವವಿದ್ಯಾಲಯದ ಮಾಲ್ ಪ್ರಾಕ್ಟೀಸ್ ಕೇಸಸ್ ಕನ್ಸಿಡರೇಶನ್ ಕಮಿಟಿ (MPCC Chairman) ಅಧ್ಯಕ್ಷರಾಗಿ ನೇಮಕಗೊಂಡಿರುತ್ತಾರೆ. ಇವರನ್ನು ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಕಾಲೇಜಿನ ಪ್ರಾಂಶುಪಾಲರು ಡಾ. ಸುರೇಶ ವಿ. ಅಭಿನಂದನೆ ಸಲ್ಲಿಸಿದ್ದಾರೆ.