ಮುಂಬೈ:ಮುಂಬೈನ ಸಹಾರಾ ಸ್ಟಾರ್ ಹೋಟೆಲ್ನಲ್ಲಿ ಇನ್ಸ್ಟಿಟ್ಯೂಟ್ ಆ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ (ಐಎಸ್ಸಿಎಂ) ಆಯೋಜಿಸಿದ್ದ 7ನೇ ಭಾರತ ಲಾಜಿಸ್ಟಿಕ್ಸ್ ರಚನಾತ್ಮಕ ಶೃಂಗ-2025ರ ವೇದಿಕೆಯಲ್ಲಿ ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ಗೆ ಬೃಹತ್ ಕಂಪನಿಗಳ ವಿಭಾಗದಲ್ಲಿ
ಲಾಜಿಸ್ಟಿಕ್ಸ್ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಆರ್ಎಲ್ ಲಾಜಿಸ್ಟಿಕ್ಸ್ ಲಿ. ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಐಎಸ್ ಸಿಎಂ ಅಧ್ಯಕ್ಷ ಡಾ. ರಾಕೇಶ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ಎಂಡಿ ಡಾ. ಆನಂದ ಸಂಕೇಶ್ವರ ಅವರ ದಕ್ಷ ನಾಯಕತ್ವ ಮತ್ತು ಎಲ್ಲ ಸಿಬ್ಬಂದಿಗಳು ಹಾಗೂ ಹೂಡಿಕೆದಾರರ ಸಂಘಟಿತ ಕೊಡುಗೆ ಈ ಪ್ರಶಸ್ತಿಗೆ ಕಾರಣ ಎಂದು ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.