ಹೊಸದಿಲ್ಲಿ : ಏಷ್ಯನ್ ಗೇಮ್ಸ್ ನಲ್ಲಿ ಮಂಗಳವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತೀಯ ಪುರುಷರ ವಾಲಿಬಾಲ್ ತಂಡವು ಕಾಂಬೋಡಿಯಾ ತಂಡದ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿ ಅಮೋಘ ಪ್ರದರ್ಶನ ನೀಡಿದೆ.ಗ್ರೂಪ್ ಸಿ ಹಣಾಹಣಿಯಲ್ಲಿ ಭಾರತೀಯ
ತಂಡವು ಕಾಂಬೋಡಿಯಾ ತಂಡವನ್ನು 25-14, 25-13, 25-19 ಅಂತರದಿಂದ ಮಣಿಸಿದೆ. ಭಾರತಕ್ಕೆ ಬುಧವಾರ ದಕ್ಷಿಣ ಕೊರಿಯಾ ತಂಡವನ್ನು ಭಾರತ ಎದುರಿಸಲಿದೆ. ಹಾಂಗ್ ಝೌ ಗೇಮ್ಸ್ ನಲ್ಲಿ ಪುರುಷರ ವಾಲಿವಾಲ್ ನಲ್ಲಿ ಒಟ್ಟು 19 ತಂಡಗಳು ಭಾಗವಹಿಸುತ್ತಿವೆ. ಪುಟ್ಬಾಲ್ ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿದೆ. ಭಾರತದ ವಿರುದ್ಧ ಚೀನಾ 5-1 ಗೋಲ್ ಅಂತರದ ಗೆಲುವು ಸಾಧಿಸಿದೆ.
ಏಷ್ಯನ್ನ್ ಗೇಮ್ಸ್ ಅಧಿಕೃತವಾಗಿ ಸೆಪ್ಟಂಬರ್ 23ರಿಂದ ಆರಂಭವಾಗಲಿದೆ.