ವಿನೋಬನಗರ: ಜಾಲ್ಸೂರು ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಶಾಲಾ ಪ್ರಾರಂಭೊತ್ಸವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಆರತಿ ಮಾಡಿ ಪುಷ್ಪಾರ್ಚನೆ ಯನ್ನು ಶಿಕ್ಷಕರು ಮಾಡಿ ಪ್ರಾರ್ಥನಾ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು.ಬಳಿಕ ವಿದ್ಯಾಸಂಸ್ಥೆಯ ಸಂಚಾಲಕರಾದ
ಸುಧಾಕರ ಕಾಮತ್ ದೀಪ ಬೆಳಗಿಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಗೌರವ ಸಲಹೆಗಾರರಾದ ನ ಸೀತಾರಾಮ ,ಆಡಳಿತ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಕಾಟೂರು, ಶಾಲಾಭಿವೃದ್ದಿ ಸಮೀತಿಯ ಅದ್ಯಕ್ಷರಾದ ಶ್ರೀಮತಿ ಸೌಮ್ಯ ಕದಿಕಡ್ಕ ,ಉಪಾಧ್ಯಕ್ಷ ರವಿರಾಜ್ ಗಬ್ಬಲಡ್ಕ. ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಯರಾದ ಜಯಪ್ರಸಾದ್ ಕಾರಿಂಜ.ಪ್ರೌಢ ಶಾಲಾ ಮುಖ್ಯೋಪಾದ್ಯರಾದ ಗಿರಿಶ್ ಕುಮಾರ್ ,ಹಾಗು ಶಾಲಾಭಿವೃದ್ದಿ ಸಮೀತಿಯ ಸದಸ್ಯರು ಪೋಷಕ ವೃಂದದವರು ಉಪಸ್ಥಿತರಿದ್ದರು.