ಸುಳ್ಯ: ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿಯ ವತಿಯಿಂದ ಸುಳ್ಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಸುಳ್ಯ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹೆಚ್.ಇ. ಎಫ್ ಅಧ್ಯಕ್ಷರಾದ ಚಿದಾನಂದ ವಿದ್ಯಾನಗರ ಅವರು ಅಂಬೆಟಡ್ಕದ ವಿವೇಕಾನಂದ ವೃತ್ತದ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಹೆಚ್.ಇ.ಎಫ್ ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ನಗರ ಪಂಚಾಯತ್ ಸದಸ್ಯರಾದ

ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್ ಭಾಗವಹಿಸಿದ್ದರು. ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಪ್ರಮುಖರಾದ ಎಂ.ಬಿ.ಸದಾಶಿವ, ವಿನಯಕುಮಾರ್ ಕಂದಡ್ಕ, ಯಶೊಧಾ ರಾಮಚಂದ್ರ, ಸುಬೋದ್ ಶೆಟ್ಟಿ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ವಿಕ್ರಂ, ಪದ್ಮನಾಭ ಪಾತಿಕಲ್ಲು, ಬಾಲಕೃಷ್ಣ ಪಾತಿಕಲ್ಲು, ಜನಾರ್ಧನ, ಆನಂದ ಪಾತಿಕಲ್ಲು, ಶರತ್ ಅಡ್ಕಾರ್, ಸುದರ್ಶನ ಸೂರ್ತಿಲ, ನಾಗೇಶ್ ಶೆಟ್ಟಿ, ಅಶ್ವತ್ ಬಿಳಿಮಲೆ, ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿಯ ಕಾರ್ಯದರ್ಶಿ ರಾಜೇಶ್ ಮೇನಾಲ, ಕೋಶಾಧಿಕಾರಿ ಹೇಮಂತ್ ಕಾಮತ್ ಸಮಿತಿಯ ಪದಾಧಿಕಾರಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









