ಸುಳ್ಯ:ಭಾರತೀಯ ಮಜ್ದೂರ್ ಸಂಘ ಸುಳ್ಯ ತಾಲೂಕು ಇದರ ವತಿಯಿಂದ ವಿಶ್ವ ಕರ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಳೆಗೇಟು ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ನ ತಿಲಕ ಭವನದಲ್ಲಿ ನಡೆಯಿತು. ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ಸಂಯೋಜಿತ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಮಜ್ದೂರ್ ಸಂಘ ದ ಕ ಜಿಲ್ಲಾ
ಉಪಾಧ್ಯಕ್ಷ ರೋಹಿತ್ಯಾಶ್ವ ಬೌದ್ಧಿಕ್ ನೀಡಿದರು. ಮುಖ್ಯ ಅತಿಥಿಗಳಾಗಿ ಗೋಪಾಲ ಕೃಷ್ಣ ಭಟ್ ಪೈಚಾರ್, ಕಟ್ಟಡ ನಿರ್ಮಾಣ ಹಾಗೂ ಇತರ ನಿರ್ಮಾಣಗಳ ಅಧ್ಯಕ್ಷ ಮಧುಸೂದನ್ ಶುಭ ಹಾರೈಸಿದರು.ರಬ್ಬರ್ ಟ್ಯಾಪರ್ ಯೂನಿಯನ್ ಅಧ್ಯಕ್ಷ ಶಶಿಕುಮಾರ್,ದ ಕ ಜಿಲ್ಲೆ ಬಿಎಂಎಸ್ ಮಾಜಿ ಅಧ್ಯಕ್ಷ ಭಾಸ್ಕರ್ ರಾವ್ ಉಸ್ಥಿತರಿದ್ದರು.ಆಟೋ ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ, ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ನಿರ್ದೇಶಕರಾದ ರೋಹಿತ್ ಜಗದೀಶ್, ಜನಾರ್ದನ, ವಿಶ್ವನಾಥ, ಭಾಸ್ಕರ ಕರುಣಾಕರ ಜಾಲ್ಸೂರು, ಕಟ್ಟಡ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘದ ತಾಲೂಕು ಕಾರ್ಯದರ್ಶಿ ಅನಿಲ್ ಕುಮಾರ್, ಕೋಶಾಧಿಕಾರಿ ದಿನೇಶ್, ರಬ್ಬರ್ ಟ್ಯಾಪರ್ ಯೂನಿಯನ್ ಸದಸ್ಯರು ಭಾಗವಹಿಸಿದ್ದರು.





