ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪಿನ್ ದಿಗ್ಗಜ ಬಿಶನ್ ಸಿಂಗ್ ಬೇಡಿ (77) ಅವರು ನಿಧನರಾಗಿದ್ದಾರೆ. 1946 ಸೆಪ್ಟೆಂಬರ್ 25ರಂದು ಜನಿಸಿದ್ದ ಇವರು ಮೂಲತಃ ಅಮೃತಸರದವರು.1966ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ, 1979ರವರೆಗೆ ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು.1967 ಮತ್ತು 1979 ರ ನಡುವಿನ
12 ವರ್ಷಗಳ ವೃತ್ತಿಜೀವನದಲ್ಲಿ 67 ಟೆಸ್ಟ್ಗಳ ಪಂದ್ಯಗಳನ್ನು ಆಡಿದ್ದಾರೆ. ಸಿಂಗ್ ಅವರು 22 ಟೆಸ್ಟ್ಗಳಲ್ಲಿ ಭಾರತದ ನಾಯಕತ್ವವನ್ನು ನಿರ್ವಹಿಸಿದ್ದರು. ಮತ್ತು 1975 ರಲ್ಲಿ ಪೂರ್ವ ಆಫ್ರಿಕಾ ವಿರುದ್ಧ ಭಾರತದ ಮೊದಲ ಏಕದಿನ ಪಂದ್ಯ ಆಡಿದರು, ಅಲ್ಲಿ ಅವರು 12 ಓವರ್ಗಳು, ಎಂಟು ಮೇಡನ್ಗಳನ್ನು ಬೌಲ್ ಮಾಡಿದರು, ಆರು ರನ್ ನೀಡಿ ಒಂದು ವಿಕೆಟ್ ಪಡೆದರು. ಬಿಶನ್ ಸಿಂಗ್ ಅವರನ್ನು ಶ್ರೇಷ್ಠ ಎಡಗೈ ಸ್ಪಿನ್ನರ್ ಅಗಿ ಗುರುತಿಸಿಕೊಂಡಿದ್ದರು.
ಸಿಂಗ್ ತಮ್ಮ ಕ್ರಿಕೆಟ್ ಜೀವನದ ಸಾಧನೆಗಾಗಿ 1970ರಲ್ಲಿ ಪದ್ಮಶ್ರೀ ಹಾಗೂ 2004 ರಲ್ಲಿ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎ. ಪ್ರಸನ್ನ, ಬಿ.ಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ ಬೌಲಿಂಗ್ ಕ್ರಾಂತಿಗೆ ನಾಂದಿಯಾದರು. ಇಂಗ್ಲೀಷ್ ಕೌಂಟಿಯಲ್ಲಿ ಮಿಂಚಿದ್ದರು. 1972 ಮತ್ತು 1977 ರ ನಡುವೆ 102 ಪಂದ್ಯಗಳಲ್ಲಿ ನಾರ್ಥಾಂಪ್ಟನ್ಶೈರ್ ತಂಡದ ಪರ ಕಣಕ್ಕಿಳಿದಿದ್ದ ಸಿಂಗ್ ಒಟ್ಟು 434 ವಿಕೆಟ್ಗಳನ್ನು ಕಿತ್ತು ದಾಖಲೆ ಬರೆದಿದ್ದರು.