ಟ್ರಿನಿಡಾಡ್:ವೆಸ್ಟ್ ಇಂಡೀಸ್ ವಿರುದ್ಧ ಟ್ರಿನಿಡಾಡ್ನಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ನಾಲ್ಕು ವಿಕೆಟ್ ನಷ್ಟಕ್ಕೆ
288 ರನ್ಗಳಿಂದ ಎರಡನೇ ಆಟ ಮುಂದುವರಿಸಿದ ಭಾರತ ಇತ್ತೀಚಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿದೆ.ಅಜೇಯ 87 ರನ್ ಗಳಿಸಿದ್ದ ಕೊಹ್ಲಿ ಶತಕ ಸಿಡಿಸಿದ್ದಾರೆ. ಕೊಹ್ಲಿ 206 ಎಸೆತಗಳಿಂದ 11 ಬೌಂಡರಿ ನೆರವಿನಿಂದ 121 ರನ್ ಗಳಿಸಿ ಔಟ್ ಆಗಿದ್ದಾರೆ. ರವೀಂದ್ರ ಜಡೇಜ 61 ರನ್ ಬಾರಿಸಿದರು. 18 ರನ್ ಗಳಿಸಿದ ಇಸಾನ್ ಕಿಶನ್ ಹಾಗೂ 6 ರನ್ ಗಳಿಸಿದ ರವಿಚಂದ್ರನ್ ಅಶ್ವಿನ್ ಕ್ರೀಸ್ನಲ್ಲಿದ್ದಾರೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 80, ಯಶಸ್ವಿ ಜೈಸ್ವಾಲ್ 57 ಗಳಿಸಿದ್ದಾರೆ. ಟಾಸ್ ಗೆದ್ದ ವೆಸ್ಟ್ಇಂಡೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.