ಸುಳ್ಯ:ದಶಕಗಳ ಹಿಂದೆ ರಸ್ತೆಯಲ್ಲಿ ರಾಜ ಗಾಂಭೀರ್ಯದೊಂದಿಗೆ ತಲೆ ಎತ್ತಿ ಓಡಾಡಿದ ಬಳಿಕ ಆಧುನಿಕ ಬದುಕಿನ ಓಗಕ್ಕೆ ಸಿಲುಕಿ ಮೂಲೆಗುಂಪಾದ ಹಳೆಯ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಪ್ರದರ್ಶನ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವದ ವಸ್ತು ಪ್ರದರ್ಶನದ ಹೈಲೈಟ್ಸ್ಗಳಲ್ಲೊಂದು.
ವೈವಿಧ್ಯಮಯ ಹಳೆಯ ಕಾರುಗಳು ಹಾಗು

ಕೆವಿಜಿಯವರು ಉಪಯೋಗಿಸುತ್ತಿದ್ದ ಕಾರು
ದ್ವಿಚಕ್ರ ವಾಹನಗಳ ಲೋಕವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದೆ. ಗತಕಾಲದ ಅಪರೂಪದ ಕಾರುಗಳು, ಸ್ಕೂಟರ್, ಬೈಕ್ಗಳು ನೋಡುಗರ ಮನ ಸೆಳೆಯುತಿದೆ. ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡ ಅವರು ಪ್ರಯಾಣಿಸುತ್ತಿದ್ದ ಕಾಂಟೆಸ್ಸಾ ಕಾರು ‘ಅಮರ ಶ್ರೀ’ ಪ್ರದರ್ಶನದಲ್ಲಿ ಮನ ಸೆಳೆಯುತಿದೆ. ಅಲ್ಲದೆ ಹಳೆಯ ಮಾರುತಿ ಡಾಲ್ಫಿನ್ ಸೇರಿದಂತೆ ಹಳೆಯ ಹಾಗು ಹೊಸ ಮೋಡೆಲ್ನ ಕಾರುಗಳು, ಹೊಸ ಹಾಗೂ ಹಳೆಯ ಜೀಪುಗಳು, ಚೇತಕ್ ಸ್ಕೂಟರ್, ಆರ್ಎಕ್ಸ್ 100, ಆರ್ಎಕ್ಸ್ಝಡ್, ಯಸ್ಡಿ ಬುಲೆಟ್ ಸೇರಿ ಹತ್ತಾರು ಹಳೆಯ ಹಾಗು

ಹೊಸ ದ್ವಿಚಕ್ರ ವಾಹನಗಳು ಪ್ರದರ್ಶನದಲ್ಲಿದೆ.
ಈಗಲೂ ಸುಸ್ಥಿಯಲ್ಲಿರುವ ದಶಮಾನಗಳಿಗೂ ಹಳೆಯ ಕಾರು, ಬೈಕ್ಗ ವೈವಿಧ್ಯಮಯ ಲೋಕವನ್ನು ತೆರೆಯಲಾಗಿದೆ. ಕಾರುಗಳ ಇತಿಹಾಸ ಮಾತ್ರವಲ್ಲದೆ ನಾವೀನ್ಯತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ಪ್ರದರ್ಶನ ತೆರೆದಿಟ್ಟಿದೆ. ಭಾನುವಾರದಿಂದ ಇನ್ನಷ್ಟು ವಿಂಟೇಜ್ ಕಾರುಗಳು, ಜೀಪುಗಳು ಪ್ರದರ್ಶನದ ಮೆರುಗು ಹೆಚ್ಚಿಸಲಿದೆ ಎಂದು ಸಂಘಟಕರು ತಿಳಿಸಿದರು.




















