ಸುಳ್ಯ:ಈ ಬಾರಿ ಸುಳ್ಯ ಜಾತ್ರೆಯಲ್ಲಿ ವಿವಿಧ ದಿನಗಳಲ್ಲಿ ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿದಿತ್ತಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಇದರಿಂದ ವ್ಯಾಪಾರಸ್ಥರ ನೆಲ ಬಾಡಿಗೆಯಲ್ಲಿ ರಿಯಾಯಿತಿಯನ್ನು ನೀಡಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮನವಿ ಮಾಡುವುದಾಗಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಸಾವಿರಾರು ರೂಪಾಯಿ ಸ್ಥಳ ಬಾಡಿಗೆ ನೀಡಿ
ತಾತ್ಕಾಲಿಕ ಅಂಗಡಿ ಕೋಣೆ ನಿರ್ಮಿಸಿ, ಲಕ್ಷ ಲಕ್ಷ ರೂಗಳ ಬಂಡವಾಳ ಹಾಕಿ ಜಾತ್ರೆಯ ವ್ಯಾಪಾರಕ್ಕೋಸ್ಕರ ಕುಳಿತ ವ್ಯಾಪಾರಿಗಳು ಧಾರಾಕಾರ ಮಳೆಯಿಂದಾಗಿ ಅಂಗಡಿಗಳನ್ನು ತೆರೆಯಲಾಗಲಿಲ್ಲ. ಮಳೆಯ ರಭಸಕ್ಕೆ ಅವರ ಸಾಮಗ್ರಿಗಳು ಕೂಡ ಕೊಚ್ಚಿಕೊಂಡು ಹೋಗಿತ್ತು. ವ್ಯಾಪಾರವನ್ನು ಮಾಡುವುದು ಬಿಟ್ಟು ತಮ್ಮ ಸಾಮಾಗ್ರಿಗಳನ್ನು ರಕ್ಷಿಸುವುದೇ ವ್ಯಾಪಾರಸ್ಥರ ಹೊಂದಿರುವ ಸವಾಲಾಗಿತ್ತು. ಮಳೆಯ ಕಾರಣದಿಂದಾಗಿ ಸಾರ್ವಜನಿಕರು ಕೂಡ ಜಾತ್ರೆಯ ಸಂತೆ ಮೈದಾನಕ್ಕೆ ಬಾರದ ಸ್ಥಿತಿ ಇತ್ತು. ಇದರಿಂದಾಗಿ ಜಾತ್ರಾ ವ್ಯಾಪಾರಸ್ಥರು ಸಂಪೂರ್ಣ ಕಂಗಾಲಾಗಿ ಹೋಗಿದ್ದಾರೆ. ಹಾಗಾಗಿ ದೇವಸ್ಥಾನದ ಆಡಳಿತ ಮಂಡಳಿಯು ವ್ಯಾಪಾರಸ್ಥರ ನೆಲ ಬಾಡಿಗೆಯಲ್ಲಿ ರಿಯಾಯಿತಿಯನ್ನು ನೀಡಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಮನವಿ ಮಾಡುತ್ತೇವೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.









