ಸುಳ್ಯ: ಕೇಂದ್ರ ಸರಕಾರದ ಜನಕ್ಷೇಮ ಕಾರ್ಯಕ್ರಮ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸುವ ಅಭಿಯಾನವಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಮತ್ತು ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಉದ್ಘಾಟಿಸಿದರು.ವೇದಿಕೆಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸದಸ್ಯರಾದ
ಎಂ.ವೆಂಕಪ್ಪ ಗೌಡ, ಮುಖ್ಯಾಧಿಕಾರಿ ಹೆಚ್.ಎಂ.ಸುಧಾಕರ, ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆ ಮ್ಯಾನೇಜರ್ ಅಶೋಕ್ ವಿಮಾನ್, ನಗರ ಪಂಚಾಯತ್ ಸದಸ್ಯರಾದ ಬುದ್ಧನಾಯ್ಕ್, ಶಶಿಕಲಾ ಎ. ನೀರಬಿದಿರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟೈಲರಿಂಗ್ ವೃತ್ತಿಯಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ರಜನಿ ಶುಭಕರ್ ಮತ್ತು ತೆಂಗು ವ್ಯಾಪಾರ ಉದ್ಯಮಿ ಬಿ. ಎಲ್. ಶಿವರಾಮ ಅವರನ್ನು ನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯರಾದ ಕಿಶೋರಿ ಶೇಟ್, ಶೀಲಾ ಅರಣ ಕುರುಂಜಿ, ಸರೋಜಿನಿ ಪೆಲ್ತಡ್ಕ, ಡೇವಿಡ್ ಧೀರಾ ಕ್ರಾಸ್ತಾ,ಶಿಲ್ಪಾಸುದೇವ್, ಪ್ರವಿತ ಪ್ರಶಾಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಫೈನಾನ್ಸಿಯಲ್ ಲಿಟರಸಿ ಕೌನ್ಸಿಲರ್ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಪಂಚಾಯತ್ನ ಉದ್ಯೋಗಿ ಜಯಲಕ್ಷ್ಮಿ ಸ್ವಾಗತಿಸಿ, ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಸರ್ಕಾರದ ಸುಮಾರು
ವಿವಿಧ ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ವಿಕಸಿತ ಸಂಕಲ್ಪ ಯಾತ್ರೆ ನಡೆಯುತಿದೆ.














