ಸುಳ್ಯ:ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ಸುಳ್ಯ ನಗರ ವ್ಯಾಪ್ತಿಯ ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಾಗಾರ ಸುಳ್ಯ ಕೆವಿಜಿ ಪುರಭವನದಲ್ಲಿ ಜರಗಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಫಲಾನುಭವಿಗಳಿಗೆ
ಚೆಕ್ ವಿತರಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ತಹಶೀಲ್ದಾರ್ ಹಾಗೂ ನಗರ ಪಂಚಾಯತ್ ಆಡಳಿತಾಧಿಕಾರಿ ಮಂಜುಳ ಎಂ, ಸಾಂದೀಪ್ ವಿಶೇಷ ಸಾಮರ್ಥ್ಯ ಮಕ್ಕಳ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಂ. ಬಿ. ಸದಾಶಿವ, ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ಬಸವರಾಜ್ ಸ್ವಾಗತಿಸಿದರು, ರಾಜ್ಯ ವಿಕಲ ಚೇತನರ ಸಂಯೋಜಕ ಪ್ರವೀಣ್ ನಾಯಕ್ ಮಾಹಿತಿ ನೀಡಿದರು.ಎಸ್ ಜೆಎಸ್ ಆರ್ ವೈ ಸಮುದಾಯ ಸಂಘಟಕಿ ಜಯಲಕ್ಷ್ಮಿ ವಂದಿಸಿದರು.
ಸಿಬ್ಬಂದಿ ದಿಲೀಪ್ ಕಾರ್ಯಕ್ರಮ ನಿರೂಪಿಸಿದರು












