ಸುಳ್ಯ: ರಾಜ್ಯ ಸರಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರೂಪಿಸಿದ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾಗಿ ಕಾಂಗ್ರೆಸ್ ಮುಖಂಡ ದೇವಚಳ್ಳ ಗ್ರಾಮದ ವಿಜೇಶ್ ಹಿರಿಯಡ್ಕ ನೇಮಕಗೊಂಡಿದ್ದಾರೆ. ಸುಳ್ಯ ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರರಾಗಿರುವ ಇವರು ದೇವಚಳ್ಳ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಜೇಸಿಐ ಪಂಜ ಪಂಚಶ್ರೀ ನಿರ್ದೇಶಕರಾಗಿದ್ದಾರೆ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾಗಿದ್ದಾರೆ, ಗುತ್ತಿಗಾರು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ನ ಮಾಜಿ ಅಧ್ಯಕ್ಷರಾಗಿದ್ದಾರೆ.