ಸುಳ್ಯ:ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಮಾ.11 ರಿಂದ 3 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದೆ. ಮಾ.11ರಂದು ಮಡಿಕೇರಿಯಿಂದ ಸಂಪಾಜೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಯಾತ್ರೆಯ ಭಾಗವಾಗಿ
ಮಧ್ಯಾಹ್ನ 3 ಗಂಟೆಗೆ ಸುಳ್ಯದಲ್ಲಿ ರೋಡ್ ಶೋ, ಸಂಜೆ 5 ಗಂಟೆಗೆ ಪುತ್ತೂರಿನಲ್ಲಿ ಸಾರ್ವಜನಿಕ ಸಭೆ. ಮಾ.12 ರಂದು ಬೆಳಿಗ್ಗೆ 9ಕ್ಕೆ ಬೆಳ್ತಂಗಡಿಯಲ್ಲಿ ರೋಡ್ ಶೋ, ಮಧ್ಯಾಹ್ನ 2.30ಕ್ಕೆ ಬಂಟ್ವಾಳದಲ್ಲಿ ಸಂಜೆ 5ಕ್ಕೆ ಮಂಗಳೂರು ದಕ್ಷಿಣ, ಮಂಗಳೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ, 13 ರಂದು ಬೆಳಿಗ್ಗೆ 9ಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಮಧ್ಯಾಹ್ನ 2ಕ್ಕೆ ಮೂಡಬಿದ್ರೆ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಸಂಜೆ 5ಕ್ಕೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. 14 ರಂದು ಪೂ.9ಕ್ಕೆ ಕಾಪು, 2ಕ್ಕೆ ಉಡುಪಿ, 5ಕ್ಕೆ ಕುಂದಾಪುರ, 15ಕ್ಕೆ ಪೂ.9ಕ್ಕೆ ಬೈಂದೂರು, 2ಕ್ಕೆ ಶೃಂಗೇರಿ, 5ಕ್ಕೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ಪ್ರಯಾಣಿಸಲಿದೆ ಎಂದು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ತಿಳಿಸಿದ್ದಾರೆ.