ಪುತ್ತೂರು:ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್ ಮಾಡಿದರೆ ಉದ್ಯೋಗ ಸಿಗಬಹುದು? ಯಾವುದನ್ನು ಆಯ್ಕೆ ಮಾಡಲಿ? ಎನ್ನುವ ಗೊಂದಲದಲ್ಲಿರುವ ವಿದ್ಯಾರ್ಥಿಗಳು, ಪೋಷಕರಿಗೆ ಸಂತಸದ ಸುದ್ದಿ ಉದ್ಯೋಗ ಕೌಶಲ್ಯತೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ದಾರಿ ದೀಪವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ತನ್ನ
ಮಾತೃ ಸಂಸ್ಥೆಯಾದ ವಿದ್ಯಾಮಾತಾ ಪೌಂಡೇಶನ್ ಟ್ರಸ್ಟ್ನ ಮೂಲಕ 2026-27ನೇ ಸಾಲಿನ ಯೋಜನೆಯಂತೆ “ಉಚಿತ ಶಿಕ್ಷಣ – ಖಚಿತ ಉದ್ಯೋಗ” ಎಂಬ ವಿಶಿಷ್ಟ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಯೋಜನೆಯನ್ನು ಪರಿಚಯಿಸಿದೆ.ವಿದ್ಯಾಮಾತಾ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಸ್ನಾತಕೋತ್ತರ ಡಿಪ್ಲೋಮಾ ಇತ್ಯಾದಿ ಉನ್ನತ ವ್ಯಾಸಂಗದ ಜೊತೆಗೆ ಸರಕಾರಿ ನೇಮಕಾತಿಗಳಿಗೆ ಪೂರ್ವ ತಯಾರಿ, ಖಾಸಗಿ ಉದ್ಯೋಗಗಳ ಕೌಶಲ್ಯ ತರಬೇತಿ, ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಮಿಲಿಟರಿ/ಪೊಲೀಸ್ ಇತ್ಯಾದಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುವವರಿಗೆ ನಿರಂತರ ದೈಹಿಕ ಸದೃಢತೆಯ ಮೈದಾನ ತರಬೇತಿ ಇವೆಲ್ಲವನ್ನು ಪ್ರಥಮ ವರ್ಷದ ಪದವಿ ಸ್ನಾತಕೋತ್ತರ ಪದವಿ ಜೊತೆಗೆ ನೀಡುತ್ತದೆ.
ವಿದ್ಯಾಮಾತಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿರುವ ಪ್ರತಿಷ್ಠಿತ ಕಂಪನಿಗಳಲ್ಲಿ ಖಾಸಗಿ ಉದ್ಯೋಗಗಳನ್ನು ಕೊಡಿಸಿ, ಉಳಿದ ವ್ಯಾಸಂಗದ ಅವಧಿಯಲ್ಲಿ ನಿರಂತರವಾಗಿ ಸರಕಾರಿ ನೇಮಕಾತಿಗಳಿಗೆ ತರಬೇತಿಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ದೂರ ಶಿಕ್ಷಣದ ಮೂಲಕ ಉನ್ನತ ವ್ಯಾಸಂಗ ಪಡೆಯಲು ಇಚ್ಛಿಸುವವರಿಗೆ ನಿರಂತರ ಉಚಿತ ಮಾರ್ಗದರ್ಶನವನ್ನು ವಿದ್ಯಾಮಾತಾವು ನೀಡಲಿದೆ. ವಿಶ್ವ ವಿದ್ಯಾನಿಲಯದ ಶುಲ್ಕ ಹೊರತುಪಡಿಸಿ ಉನ್ನತ ವ್ಯಾಸಂಗದ ಮಾರ್ಗದರ್ಶನಕ್ಕೆ ವಿದ್ಯಾಮಾತಾ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ.
ಈ ಮೂಲಕ ಉನ್ನತ ವ್ಯಾಸಂಗದ ಜೊತೆಗೆ ಸರಕಾರಿ ನೇಮಕಾತಿಗಳಿಗೆ ಪೂರ್ವ ತಯಾರಿ, ಖಾಸಗಿ ಉದ್ಯೋಗ ಕೌಶಲ್ಯ ತರಬೇತಿ, ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ ಎಲ್ಲವನ್ನು ನೀಡಿ ಒಂದೇ ವರ್ಷದಲ್ಲಿ ಖಾಸಗಿ ಉದ್ಯೋಗವನ್ನು ಕೂಡ ಒದಗಿಸಿ ಕೊಟ್ಟು ಯಾರಿಗೂ ಹೊರೆಯಾಗದಂತೆ ಉನ್ನತ ವ್ಯಾಸಂಗವನ್ನು ಮುಗಿಸುವುದರ ಜೊತೆಗೆ ನಿರಂತರ ಸರಕಾರಿ ನೇಮಕಾತಿಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಪಡೆಯುವಂತೆ ಮಾಡುವ ಯೋಜನೆಯನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು. ತರಬೇತಿಯಲ್ಲಿರುವ ಪ್ರತಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಮಾರ್ಗದರ್ಶನದ ಜೊತೆಗೆ ಉಚಿತ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಮಿಲಿಟರಿ ಇತ್ಯಾದಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುವವರಿಗೆ ಉಚಿತ ತರಬೇತಿ ಕೂಡ ಲಭ್ಯವಿರುತ್ತದೆ. ಪುತ್ತೂರು APMC ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕೇಂದ್ರ ಕಚೇರಿಗೆ ಪೋಷಕರ ಜೊತೆಯಲ್ಲಿ ವಿದ್ಯಾರ್ಥಿಗಳು ತೆರಳಿ ಉಚಿತ ಆಪ್ತ ಸಮಾಲೋಚನೆಯ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಪಡೆಯಬಹುದಾಗಿದೆ. ಉಚಿತ ಆಪ್ತ ಸಮಾಲೋಚನೆಗಾಗಿ ಮೊಬೈಲ್ ನಂಬರ್ 9620468869 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಈ ಮೂಲಕ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.









