ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ ಬಳಿ ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಮಹಾವಿಷ್ಣು ಮೂರ್ತಿ ದೈವಸ್ಥಾನ ಸಮಿತಿ ಅಧ್ಯಕ್ಷ ಜಗದೀಶ್ ರೈ ನೆರವೇರಿಸಿದರು. ಗ್ರಾಮ
ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಮತಿ ಶಕ್ತಿವೇಲು, ಎಸ್. ಕೆ. ಹನೀಫ, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ,ಮಾಜಿ ಸದಸ್ಯ ನಾಗೇಶ್ ಪಿ. ಆರ್, ಷಣ್ಮುಗಂ, ಕೇಶವ ಬಂಗ್ಲೆಗುಡ್ಡೆ, ಉಮೇಶ್, ಪ್ರಮೋದ್ ಕೈಪಡ್ಕ,ರಹೀಮ್ ಬೀಜದಕಟ್ಟೆ,ಸಂಗಮೇಶ್, ರಾಚು ಚಟ್ಟೆಕಲ್ಲು ಮಲ್ಲಿನಾಥ್, ಮದು ಪಂಜ ಮೊದಲದವರು ಉಪಸ್ಥಿತರಿದ್ದರು