ಪುತ್ತೂರು: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಸಂವಹನ ಮಾಧ್ಯಮವಾಗಿರುವ ಇಂಗ್ಲಿಷ್ ಭಾಷಾ ನೈಪುಣ್ಯತೆಯ ಅನಿವಾರ್ಯತೆಯನ್ನು ಮನಗಂಡು, ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ “ವಿದ್ಯಾಮಾತಾ ಅಕಾಡೆಮಿ’’ಯು ವಿನೂತನ ಮಾದರಿಯ
ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಪ್ರಾರಂಭಿಸಿದೆ.
ತರಬೇತಿಯ ವಿವರ:
ಈ ತರಬೇತಿಯು ಸಂಪೂರ್ಣವಾಗಿ ಆನ್ಲೈನ್ ಲೈವ್ (Online Live) ತರಗತಿಗಳ ಮೂಲಕ ನಡೆಯಲಿದ್ದು, ಒಟ್ಟು 6 ತಿಂಗಳ ಕಾಲ ನುರಿತ ತರಬೇತುದಾರರಿಂದ ಬೋಧನೆ ನಡೆಯಲಿದೆ. ಈಗಾಗಲೇ ಹಲವಾರು ಸರ್ಕಾರಿ ನೇಮಕಾತಿ ಪರೀಕ್ಷೆಗಳು ಹಾಗೂ ಸಂದರ್ಶನಗಳಿಗೆ ಯಶಸ್ವಿ ತರಬೇತಿ ನೀಡುತ್ತಿರುವ ಅಕಾಡೆಮಿಯು, ಈಗ ಸಾರ್ವಜನಿಕರ ಇಂಗ್ಲಿಷ್ ಭಾಷಾ ಕೌಶಲ್ಯ ವೃದ್ಧಿಗಾಗಿ ಈ ಸುವರ್ಣಾವಕಾಶವನ್ನು ಕಲ್ಪಿಸಿದೆ.
ಯಾರು ಭಾಗವಹಿಸಬಹುದು?:
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಹಾಗೂ ಸರ್ಕಾರಿ ವಲಯದ ಉದ್ಯೋಗಿಗಳು, ವಿದೇಶದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವವರು, ಗೃಹಿಣಿಯರು, ಸ್ವ-ಉದ್ಯೋಗಿಗಳು ಹಾಗೂ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾ ಆಕಾಂಕ್ಷಿಗಳು ಈ ತರಬೇತಿಯ ಪ್ರಯೋಜನ ಪಡೆಯಬಹುದು.
ದಾಖಲಾತಿ ಪ್ರಕ್ರಿಯೆ:
ತರಬೇತಿಗಾಗಿ ಈಗಾಗಲೇ ದಾಖಲಾತಿ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳು
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ:
9620468869 / 9148935808





