ಸುಳ್ಯ: ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ಕಂಪ್ಯೂಟರ್ ಶಿಕ್ಷಣವನ್ನು ಪ್ರಾರಂಭಿಸಿದೆ. ಕಂಪ್ಯೂಟರ್ ತರಗತಿಗಳ ಉದ್ಘಾಟನೆಯನ್ನು ಸುಳ್ಯದ ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಭಟ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವೀರಪ್ಪ ಕಣ್ಕಲ್ ಭಾಗವಹಿಸಿದ್ದರು. ಮಾತನಾಡಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಳ್ಯ ವಿದ್ಯಾಮಾತಾ ಅಕಾಡೆಮಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಡ್ಡಡ್ಕ, ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯ ಚಂದ್ರಕಾಂತ್, ಯಶಸ್ವಿನಿ ಹಾಗೂ ಪ್ರಸ್ತುತ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಿಥುನ್ ರೈ ರವರು ಸಹಕರಿಸಿದರು.